ADVERTISEMENT

ಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 11:35 IST
Last Updated 27 ಆಗಸ್ಟ್ 2019, 11:35 IST
   

ಚಿಕ್ಕಮಗಳೂರು: ಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೂಡಿಗೆರೆ ತಾಲ್ಲೂಕಿನ ಮಲೆಮನೆ ಗ್ರಾಮದಲ್ಲಿ ಮಳೆ ಹಾನಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗೆ ಮನೆ, ತೋಟ, ಹೊಲಗಳು ಹಾನಿಯಾಗಿವೆ. ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಹಾನಿಯಸಮಗ್ರ ವರದಿ ಪಡೆದು ಪುನರ್ವಸತಿಗೆ ಕ್ರಮ ವಹಿಸಲಾಗುವುದು' ಎಂದರು.

ADVERTISEMENT

ಈಗ ಹಾನಿ ವಿವರ ಪಡೆಯುತ್ತಿದ್ದೇವೆ. ಅಧಿವೇಶನ ಕರೆದು ಅತಿವೃಷ್ಟಿ ಬಗ್ಗೆ ಚರ್ಚಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಉತ್ತರಿಸಿದರು. ಅದೇ ವೇಳೆ ಖಾತೆ ಅಸಮಾಧಾನ, ಶಮನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

18ನಿಮಿಷಗಳಲ್ಲಿ ವೀಕ್ಷಣೆ: ಯಡಿಯೂರಪ್ಪ ಅವರು ಮಲೆಮನೆ ಅತಿವೃಷ್ಟಿ ಪ್ರದೇಶದಲ್ಲಿ 18 ನಿಮಿಷದಲ್ಲಿ ವೀಕ್ಷಣೆ ಮಾಡಿ, ಸಂತ್ರಸ್ತರೊಂದಿಗೆ ಮಾತನಾಡಿ ವಾಪಸ್ ತೆರಳಿದರು.
ಪುನರ್ವಸತಿಗಾಗಿ ಸಂತ್ರಸ್ತರು ಮುಖ್ಯಮಂತ್ರಿ ಎದುರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.