ADVERTISEMENT

ದಾಖಲಾತಿ ನೀಡಲು ವಿಳಂಬ: ಕೆನರಾ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:34 IST
Last Updated 9 ಸೆಪ್ಟೆಂಬರ್ 2025, 5:34 IST
   

ಬಾಳೆಹೊನ್ನೂರು: ಸಾಲ ಪಡೆಯುವಾಗ ಅಡವಿಟ್ಟಿದ್ದ ಮೂಲ ದಾಖಲೆಗಳನ್ನು ಸಾಲ ಮರುಪಾವತಿಸಿ ಎರಡು ವರ್ಷ ಕಳೆದರೂ  ಎರಡು ವರ್ಷದಿಂದ ಬ್ಯಾಂಕಿನ ಸಿಬ್ಬಂದಿ ಸತಾಯಿಸುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ಬ್ಯಾಂಕಿನ ಜನರಲ್ ಮ್ಯಾನೇಜರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ವೀಣಾ ಡಾ.ಕೃಷ್ಣ ಅವರು ಎಲಮಡಲಿನ (ಸಿಂಡಿಕೇಟ್ ಬ್ಯಾಂಕ್) ಪ್ರಸ್ತುತ ಕೆನರಾ ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿ ಮಾಡಿದ್ದು, ಸಾಲಕ್ಕಾಗಿ ಅಡವಿಟ್ಟಿದ್ದ ಮೂಲ ದಾಖಲೆಗಳನ್ನು ನೀಡುವಂತೆ ಅವರು ಬ್ಯಾಂಕಿನ ವ್ಯವಸ್ಥಾಪಕರಿಗೆ ಎರಡು ವರ್ಷಗಳಿಂದ ಮನವಿ ಮಾಡಿದ್ದರೂ ದಿನಕ್ಕೊಂದು ನೆಪ ಹೇಳಿ ದಾಖಲೆ ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಆದೇಶದ ಅನ್ವಯ ಸಾಲ ಮರುಪಾವತಿಸಿದ ಒಂದು ತಿಂಗಳೊಳಗೆ ಅಡವಿಟ್ಟ ಮೂಲ ದಾಖಲೆಗಳನ್ನು ವಾಪಸ್‌ ಸಾಲಗಾರರಿಗೆ ನೀಡಬೇಕು. ಒಂದು ತಿಂಗಳ ಒಳಗೆ ದಾಖಲೆ ನೀಡದಿದ್ದಲ್ಲಿ ಪ್ರತಿ ದಿನಕ್ಕೆ ₹5 ಸಾವಿರ ದಂಡವನ್ನು ಗ್ರಾಹಕರಿಗೆ ಪಾವತಿಸಬೇಕು ಎಂದಿದೆ. ಈ ಹಿನ್ನಲೆಯಲ್ಲಿ ದಾಖಲೆ ನೀಡದೆ ವಿಳಂಬ ನೀತಿ ಅನುಸರಿಸಿದ ಬ್ಯಾಂಕ್ ಎರಡು ವರ್ಷದ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.