ADVERTISEMENT

ಚಾರ್ಮಾಡಿಯಲ್ಲಿ ಕಾಡಾನೆ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಮೇ 2020, 10:53 IST
Last Updated 8 ಮೇ 2020, 10:53 IST
ಚಾರ್ಮಾಡಿ ಘಾಟಿಯ 7ನೇ ತಿರುವಿನ ರಸ್ತೆಯಲ್ಲಿ ನಿಂತಿರುವ ಒಂಟಿಸಲಗದ ದೃಶ್ಯ
ಚಾರ್ಮಾಡಿ ಘಾಟಿಯ 7ನೇ ತಿರುವಿನ ರಸ್ತೆಯಲ್ಲಿ ನಿಂತಿರುವ ಒಂಟಿಸಲಗದ ದೃಶ್ಯ   

ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ಒಂಟಿಸಲಗ ಪ್ರತ್ಯಕ್ಷವಾಗಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

ಕಳೆದ ತಿಂಗಳಲ್ಲಿ ಪ್ರತ್ಯಕ್ಷವಾಗಿದ್ದ ಒಂಟಿ ಸಲಗವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಅಧಿಕಾರಿಗಳ ತಂಡ ಪಟಾಕಿ ಸಿಡಿಸಿ, ಕಾಡಿಗೆ ಅಟ್ಟಿದ್ದರು. ಇದೀಗ ಮತ್ತೆ ಒಂಟಿಸಲಗನ ಹಾವಳಿಯಿಂದ ತರಕಾರಿ ಹಾಗೂ ಇತರ ವಾಹನದ ಸವಾರರು ಭಯಭೀತರಾಗಿದ್ದಾರೆ.

ಗುರುವಾರ ಮಧ್ಯಾಹ್ನ ಒಂಟಿ ಸಲಗವು 7ನೇ ತಿರುವಿನ ಆಸುಪಾಸಿನ ಸೇತುವೆ ಬಳಿ ನಿಂತುಕೊಂಡಿತ್ತು. ಆ ಸಮಯದಲ್ಲಿ ತರಕಾರಿ ವಾಹನವೊಂದು ಕೊಟ್ಟಿಗೆಹಾರ ಕಡೆಗೆ ಬರುತ್ತಿದ್ದಾಗ ಒಂಟಿ ಸಲಗವನ್ನು ಕಂಡು ವಿಡಿಯೊ ಮಾಡಿದ್ದಾರೆ.

ADVERTISEMENT

‘ಚಾರ್ಮಾಡಿಯಿಂದ ಕೊಟ್ಟಿಗೆಹಾರ ಬರಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಬರಬೇಕು. ಇಕ್ಕಟ್ಟಿನ ಸ್ಥಳದಲ್ಲಿ ಕಾಡಾನೆ ಪ್ರತ್ಯಕ್ಷವಾದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಲಾಕ್‍ಡೌನ್‍ನಿಂದ ತರಕಾರಿ ವಾಹನಗಳು, ಆಂಬುಲೆನ್ಸ್ ಮತ್ತಿತರ ಅಗತ್ಯವಾದ ವಾಹನಗಳು ಓಡಾಡುತ್ತಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಒಂಟಿ ಸಲಗನನ್ನು ಸ್ಥಳಾಂತರಿಸಬೇಕು’ ಎಂದು ತರಕಾರಿ ವಾಹನ ಸವಾರ ಮಂಜುನಾಥ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.