ADVERTISEMENT

ನರಸಿಂಹರಾಜಪುರ: ನಿವೃತ್ತ ನೌಕರರ ಸಂಘದ ಸಭೆ, ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 5:44 IST
Last Updated 23 ಜನವರಿ 2023, 5:44 IST
ನರಸಿಂಹರಾಜಪುರದ ಉಮಾಮಹೇಶ್ವರ ಸಭಾ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆಯಲ್ಲಿ 75ವರ್ಷ ಪೂರೈಸಿದ ಸಂಘದ 12 ಮಂದಿಯನ್ನು ಸನ್ಮಾನಿಸಲಾಯಿತು. ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಗಣಪತಿ ಇದ್ದರು.
ನರಸಿಂಹರಾಜಪುರದ ಉಮಾಮಹೇಶ್ವರ ಸಭಾ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆಯಲ್ಲಿ 75ವರ್ಷ ಪೂರೈಸಿದ ಸಂಘದ 12 ಮಂದಿಯನ್ನು ಸನ್ಮಾನಿಸಲಾಯಿತು. ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಗಣಪತಿ ಇದ್ದರು.   

ನರಸಿಂಹರಾಜಪುರ: ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘವು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸು ತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಧರ್ಮರಾಜ್ ಹೇಳಿದರು.

ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಭಾನುವಾರ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಪ್ರತಿ ವರ್ಷ ಪ್ರವಾಸ ಹಮ್ಮಿಕೊಳ್ಳಬೇಕು. ಈ ವರ್ಷ ಸಂಘದ ಸಾಧಕರನ್ನು ಗುರುತಿಸಿ ಸನ್ಮಾನಿ ಸುತ್ತಿರುವುದು ಸೂಕ್ತವಾಗಿದೆ ಎಂದರು.

ADVERTISEMENT

ಅಧ್ಯಕ್ಷತೆಯನ್ನು ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಗಣಪತಿ ವಹಿಸಿದ್ದರು.

ಸಂಘದ ಕಾರ್ಯದರ್ಶಿ ಚಕ್ರಪಾಣಿ ವರದಿ ವಾಚಿಸಿ ಜಮಾ ಖರ್ಚು ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಆರ್.ಸುನಂದಮ್ಮ, ನಿಕಟಪೂರ್ವ ಅಧ್ಯಕ್ಷ ಶಶಿಮೋಹನ್, ವೆಂಕಟೇಶ್, ಕೆ.ಎಸ್.ರಾಜಕುಮಾರ್ ಇದ್ದರು. ನೂತನ ಕಾರ್ಯಕಾರಿ ಮಂಡಳಿ ರಚಿಸಲು ತೀರ್ಮಾನಿಸಲಾಯಿತು.

75 ವರ್ಷ ಪೂರೈಸಿದ ನಿವೃತ್ತ ನೌಕರರ ಸಂಘದ ಸದಸ್ಯರಾದ ಎಚ್.ಕೆ. ಕೃಷ್ಣಮೂರ್ತಿ, ಟಿ.ಆರ್. ನಾಗಪ್ಪಗೌಡ, ಎನ್.ಎಸ್. ಕಮಲಮ್ಮ, ಎಂ.ಎಸ್. ಚಿಣ್ಣಪ್ಪ, ಕೆ.ಕೆ. ಲಕ್ಷ್ಮೀರಾವ್, ಯಶೋದಮ್ಮ, ಪರಮೇಶ್ವರ ಗೌಡ, ಬಿ.ರತ್ನಮ್ಮ, ಇದಿನಬ್ಬ ಬ್ಯಾರಿ, ಎಚ್.ಎಸ್.ಮಂಜುನಾಥ್ , ಕೆ.ನಾಗರಾಜ್, ಜೈನಾಬಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.