ADVERTISEMENT

ಬದುಕು ಬಲಗೊಳ್ಳಲು ಆಚಾರ ವಿಚಾರ ಮುಖ್ಯ

ಶ್ರಾವಣ ಮಾಸದ ಪುರಾಣ ಪ್ರವಚನದಲ್ಲಿ ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:14 IST
Last Updated 5 ಆಗಸ್ಟ್ 2022, 2:14 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಪುರಾಣ ಪ್ರವಚನದಲ್ಲಿ ‘ರಂಭಾಪುರಿ ಬೆಳಗು’ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವೀರಸೋಮೇಶ್ವರ ಸ್ವಾಮೀಜಿ, ಬಬಲಾದ ದಾನಯ್ಯಸ್ವಾಮಿ, ಬಸಯ್ಯಸ್ವಾಮಿ, ಉಟಗಿ ಶಿವಪ್ರಸಾದಸ್ವಾಮಿ ಇದ್ದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಪುರಾಣ ಪ್ರವಚನದಲ್ಲಿ ‘ರಂಭಾಪುರಿ ಬೆಳಗು’ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವೀರಸೋಮೇಶ್ವರ ಸ್ವಾಮೀಜಿ, ಬಬಲಾದ ದಾನಯ್ಯಸ್ವಾಮಿ, ಬಸಯ್ಯಸ್ವಾಮಿ, ಉಟಗಿ ಶಿವಪ್ರಸಾದಸ್ವಾಮಿ ಇದ್ದರು.   

ರಂಭಾಪುರಿ ಪೀಠ/ಬಾಳೆಹೊನ್ನೂರು: ‘ಬದುಕು ಬಲಗೊಳ್ಳಲು ಆಚಾರ ವಿಚಾರ ಎರಡೂ ಮುಖ್ಯ. ಮನುಷ್ಯ ಜೀವನದಲ್ಲಿ ಸತ್ಯ, ಧರ್ಮ, ಕರ್ತವ್ಯ, ಶೀಲ ಬಾಳಿನ ಉಸಿರಾಗಬೇಕು. ಏನೆಲ್ಲ ಸಿರಿ ಸಂಪತ್ತು ಗಳಿಸಿದರೂ ಮಾನವನಿಗೆ ನಿಜ ಶಾಂತಿಯಿಲ್ಲ. ಜೀವನದಲ್ಲಿ ಆದರ್ಶ ಗುರಿ ಮತ್ತು ಗುರುವನ್ನು ಆಶ್ರಯಿಸಿ ನಡೆದರೆ ಉನ್ನತಿ ಕಾಣಲು ಸಾಧ್ಯ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದೇಹ ಭಗವಂತನಿರುವ ಗುಡಿ. ಗುಡಿಯಲ್ಲಿ ದೇವರು ಇದ್ದರೆ ಬೆಲೆ ನೆಲೆ ಉಂಟು. ಇಲ್ಲದಿದ್ದರೆ ಏನೂ ಇಲ್ಲ. ಮನುಷ್ಯ ಸುಖ ಬಯಸುವುದು ಸಹಜ. ಆದರೆ, ಆ ದಾರಿಯಲ್ಲಿ ನಡೆಯುವುದು ಬಲು ಮುಖ್ಯ. ಶಾಂತಿ, ಸಂತೃಪ್ತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಅರಿಯಬೇಕು’ ಎಂದರು.

ADVERTISEMENT

ಪುರಾಣ ಪ್ರವಚನ ಮಾಡಿದ ಗಂವ್ಹಾರ ಹಿರೇಮಠದ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ‘ಲೋಕ ಕಲ್ಯಾಣ ಮತ್ತು ಮಾನವ ಕಲ್ಯಾಣದ ಗುರಿಯೊಂದಿಗೆ ರೇಣುಕಾಚಾರ್ಯರು ನಿರಂತರ ಶ್ರಮಿಸಿದರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ ಬಹು ಮುಖ್ಯವೆಂದು ಸಾರಿದ್ದನ್ನು ಮರೆಯಬಾರದು’ ಎಂದರು.
‘ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಬಬಲಾದ ದಾನಯ್ಯಸ್ವಾಮಿ, ಬಸಯ್ಯಸ್ವಾಮಿ, ಉಟಗಿ ಶಿವಪ್ರಸಾದ
ಸ್ವಾಮಿ, ಘನಲಿಂಗ ದೇವರು, ವಿಶ್ವನಾಥ ದೇವರು, ಪ್ರಶಾಂತ ರಿಪ್ಪನ್‍ಪೇಟೆ, ರವಿ, ಚಂದ್ರಶೇಖರ, ಗಂಗಾಧರಸ್ವಾಮಿ ವೀರೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.