ADVERTISEMENT

ಚಿಕ್ಕಮಗಳೂರು: ಬಿಜೆಪಿಯಿಂದ ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 5:14 IST
Last Updated 18 ನವೆಂಬರ್ 2023, 5:14 IST
   

ಚಿಕ್ಕಮಗಳೂರು: ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ಪೋಸ್ಟರ್ ಅಭಿಯಾನ ನಡೆಸಿದ್ದು, ‘ಸಿದ್ದರಾಮಯ್ಯ ಶ್ಯಾಡೊ ಸಿ.ಎಂ’ ಎಂಬುದು ಸೇರಿ ಹಲವು ಪೋಸ್ಟರ್‌ಗಳನ್ನು ಅಲ್ಲಲ್ಲಿ ಅಂಟಿಸಲಾಗಿದೆ.

ತಾಲ್ಲೂಕು ಕಚೇರಿ, ಮೆಸ್ಕಾಂ ಕಚೇರಿ, ತಾಲ್ಲೂಕು ಪಂಚಾಯಿತಿ, ಪ್ರವಾಸಿ ಮಂದಿರದ ಗೋಡೆಗಳ ಮೇಲೆ ಅಂಟಿಸಲಾಗಿದೆ.

‘ವೈಎಸ್‌ಟಿ ಸಂಗ್ರಹ ಸಮಿತಿಯ ಸುತ್ತೋಲೆ!, ಯಾವುದೇ ಸರ್ಕಾರಿ ಸಂಬಂಧಿತ ಸೇವೆಗಾಗಿ ಹಲೋ ಅಪ್ಪಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ಪೇಮೆಂಟ್ ಮಾಡಿ’ ಎಂದು ಬರೆದು ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇರುವ ಚಿತ್ರಗಳನ್ನು ಜೋಡಿಸಿ ಪೋಸ್ಟರ್ ಸಿದ್ಧಪಡಿಸಿ ಅಂಟಿಸಲಾಗಿದೆ.

ADVERTISEMENT

‘ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆ’, ‘ಈ ತಿಂಗಳ ಕಪ್ಪ ಎಲ್ಲಿ’ ಎಂದು ಪಶ್ನೆ ಕೇಳಿರುವ ಬರಹದೊಂದಿಗೆ ಪೋಸ್ಟರ್‌ ಜತೆಗೆ ಸೋನಿಯಾ ಗಾಂಧಿ ಚಿತ್ರ ಜೋಡಿಸಿ ಪೋಸ್ಟರ್ ಮಾಡಿಸಲಾಗಿದೆ. ಐದು ಗ್ಯಾರಂಟಿಗಳ ವಿರುದ್ಧ ವ್ಯಂಗ್ಯ ಮಾಡಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ಪೊಲೀಸರು ಇವುಗಳನ್ನು ತೆರವುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.