ADVERTISEMENT

ಚಿಕ್ಕಮಗಳೂರು| ಚಡ್ಡಿ ಗ್ಯಾಂಗ್ ಹೆಸರಿನ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 4:32 IST
Last Updated 26 ಅಕ್ಟೋಬರ್ 2025, 4:32 IST
ಚಡ್ಡಿ ಗ್ಯಾಂಗ್‌ನಿಂದ ವಶಪಡಿಸಿಕೊಂಡ ಆಭರಣಗಳ ಜತೆಯಲ್ಲಿ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು
ಚಡ್ಡಿ ಗ್ಯಾಂಗ್‌ನಿಂದ ವಶಪಡಿಸಿಕೊಂಡ ಆಭರಣಗಳ ಜತೆಯಲ್ಲಿ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು   

ಚಿಕ್ಕಮಗಳೂರು: ರಾಜ್ಯದ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಚಡ್ಡಿ ಗ್ಯಾಂಗ್ ಹೆಸರಿನ ಇಬ್ಬರು ಅಂತರರಾಜ್ಯ ಕಳ್ಳರನ್ನು ಪೊಲಿಸರು ಬಂಧಿಸಿದ್ದು, ₹32 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಜಲನಾ ಜಿಲ್ಲೆ ಆಸ್ತಿ ಗ್ರಾಮದ ಗಣೇಶ ನಗರ ನಿವಾಸಿ ಪಪ್ಪು ಟಿಪ್ಪ ಪವಾರ್(40), ಪಿಪ್ಪರ ಗ್ರಾಮದ ಮಂಗೇಶ್ ಅಂಕುಶ್ ಸಿಂದೆ(23) ಬಂಧಿತ ಆರೋಪಿಗಳು.

ನಗರ ಠಾಣೆ ವ್ಯಾಪ್ತಿಯಲ್ಲಿ ಚೈತ್ರಾ ಎಂಬುವರ ಮನೆಯಲ್ಲಿ ಜುಲೈನಲ್ಲಿ ಬಾಗಿಲು ಮುರಿದು ಕಳ್ಳತನ ನಡೆಸಲಾಗಿತ್ತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ರಾಜ್ಯದ ವಿವಿಧೆಡೆ 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಅನುಮಾನಾಸ್ಪದ ವ್ಯಕ್ತಿಗಳ ಭಾವಚಿತ್ರ ಸಂಗ್ರಹಿಸಲಾಗಿತ್ತು. ತಾಂತ್ರಿಕವಾಗಿ ಮಾಹಿತಿ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವಿಕ್ರಮ ಅಮಟೆ ಮಾಹಿತಿ ನೀಡಿದ್ದಾರೆ.

ಬಂತರಿಂದ 248 ಗ್ರಾಂ ಚಿನ್ನದ ಗಟ್ಟಿ, 250 ಗ್ರಾಂ ಬೆಳ್ಳಿ ಆಭರಣ, ₹26 ಸಾವಿರ ನಗದು ಸೇರಿ ₹32 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ ನಾಲ್ಕು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.