ADVERTISEMENT

ಚಿಕ್ಕಮಗಳೂರು | 580 ಎಕರೆ ಅರಣ್ಯ ಒತ್ತುವರಿ ಪತ್ತೆ: ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
   

ಬಾಳೆಹೊನ್ನೂರು (ಚಿಕ್ಕಮಗಳೂರು): ಪ್ರತ್ಯೇಕ ಪ್ರಕರಣಗಳಲ್ಲಿ 580 ಎಕರೆ ಅರಣ್ಯ ಜಾಗ ಒತ್ತುವರಿ ಆಗಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ. 9 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.

ಕಳಸ ತಾಲ್ಲೂಕಿನ ತನೂಡಿ ಗ್ರಾಮದ ಹಲಸೂರು ಮೀಸಲು ಅರಣ್ಯ ಪ್ರದೇಶದ ಸರ್ವೆ ನಂ. 122ರಲ್ಲಿ 450 ಎಕರೆ ಜಾಗವನ್ನು ತನೂಡಿ ಎಸ್ಟೇಟ್‌ನ ಎಸ್.ಬಿ. ಶಂಕರ್, ಎಸ್.ಬಿ. ಪ್ರಭಾಕರ್, ಸುನೀತಾ ಒತ್ತುವರಿ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬಾಳೆಹೊನ್ನೂರು ಹೋಬಳಿ ಬಿ.ಕಣಬೂರು ಗ್ರಾಮದ ಸರ್ವೆ ನಂ.9 ಹಾಗೂ ಬನ್ನೂರು ಗ್ರಾಮದ ಸರ್ವೇ ನಂ.95, 96, 97ರಲ್ಲಿ 130 ಎಕರೆ ಬನ್ನೂರು ಕಿರು ಅರಣ್ಯ ಪ್ರದೇಶವನ್ನು ಒತ್ತುವರಿ ಆಗಿದೆ ಎಂದು ಎಫ್‌ಐಆರ್‌ ದಾಖಲಿಸಲಾಗಿದೆ.

ADVERTISEMENT

ಬೈರೇಗುಡ್ಡ ಎಸ್ಟೇಟ್‌ನ ಮಹಮ್ಮದ್ ಇಫ್ತಿಖಾರ್ ಆದಿಲ್, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಇಲಿಯಾಸ್, ಅಬ್ದುಲ್ ವಹೀದ್, ಅಬ್ದುಲ್ ಮುನಾಫ್ ಹಾಗೂ ಅಬ್ದುಲ್ ಗಫಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. 

ಎರಡೂ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ವಿವಿಧ ಕಲಂ ಅಡಿ ಎಸಿಎಫ್ ಮೋಹನಕುಮಾರ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಮಂಜುನಾಥ್ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಪತ್ತೆಯಾದ ಅತಿದೊಡ್ಡ ಒತ್ತುವರಿ ಪ್ರಕರಣ ಇದಾಗಿದೆ. ಇದೇ ರೀತಿಯ ಒತ್ತುವರಿ ಗುರುತಿಸಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.