ADVERTISEMENT

Chikkamagaluru Rains | ಭಾರಿ ಮಳೆ: ಹಳ್ಳಕ್ಕೆ ಉರುಳಿದ ಕಾರುಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2025, 8:19 IST
Last Updated 25 ಮೇ 2025, 8:19 IST
<div class="paragraphs"><p>ಹಳ್ಳಕ್ಕೆ ಉರುಳಿದ ಕಾರು&nbsp;</p></div>

ಹಳ್ಳಕ್ಕೆ ಉರುಳಿದ ಕಾರು 

   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಎಡಬಿಡದೆ ಸುರಿಯುತ್ತಿದೆ. ಮಳೆ–ಗಾಳಿಯ ನಡುವೆ ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಕಾರುಗಳು ಹಳ್ಳಕ್ಕೆ ಉರುಳಿವೆ.

ಮೂಡಿಗರೆ ತಾಲ್ಲೂಕಿನ ಬಣಕಲ್ ಸಮೀಪದ ರಾಮಣ್ಣನ‌ ಗಂಡಿ ಮತ್ತು ಚಕ್ಕಮಕ್ಕಿ ಎಂಬ ಸ್ಥಳದಲ್ಲಿ ಎರಡು ಕಾರುಗಳು ಹೇಮಾವತಿ ಉಪನದಿಗೆ ಉರುಳಿದ್ದು, ನೀರಿನಲ್ಲಿ ಮುಳಗಿವೆ. ಕಾರಿನಲ್ಲಿ ಇದ್ದ ಎಲ್ಲರನ್ನೂ ಸ್ಥಳೀಯರು ಮೇಲಕ್ಕೆ ಕರೆ ತಂದಿದ್ದು, ಯಾರಿಗೂ ತೊಂದೆಯಾಗಿಲ್ಲ.

ADVERTISEMENT

ಇದೇ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮತ್ತೊಂದು ಕಾರು ಹೆದ್ದಾರಿಯ ರಸ್ತೆ ಪಕ್ಕಕ್ಕೆ‌ ಉರುಳಿದೆ. ಬಣಕಲ್‌ನಿಂದ ಕೊಟ್ಟಿಗೆಹಾರ ಮಾರ್ಗದಲ್ಲಿ ಒಟ್ಟು ಮೂರು ಕಾರುಗಳು ಅಪಘಾತಕ್ಕೆ ಈಡಾಗಿವೆ. 

ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ಕಸ್ಕೇಬೈಲ್ ಬಳಿ ರಸ್ತೆಗೆ ಅಡ್ಡಲಾಗಿ ‌ಮರ ಬಿದ್ದಿರುವುದರಿಂದ ಬೇಲೂರು‌–ಚೀಕನಹಳ್ಳಿ–ಮೂಡಿಗೆರೆ ರಸ್ತೆ ‌ಸಂಚಾರಕ್ಕೆ ಅಡ್ಡಿಯಾಗಿದೆ. 

ಕಳಸ, ಕೊಪ್ಪ, ಬಾಳೆಹೊನ್ನೂರು, ಆಲ್ದೂರು, ಶೃಂಗೇರಿ, ಎನ್.ಆರ್.ಪುರ, ಚಿಕ್ಕಮಗಳೂರು ನಗರ ಸೇರಿ ಎಲ್ಲೆಡೆ ಮಳೆ ಆರ್ಭಟ ಮುಂದುವರಿದಿದೆ. ಹಲವು ಮನೆಗಳ ಮೇಲೆ ಮರಗಳು ಉರುಳಿವೆ. ವಿದ್ಯುತ್ ಕಂಬಗಳೂ ನೆಲಕಚ್ಚಿವೆ. ಬಾಬಾಬುಡನ್‌ಗಿರಿ ರಸ್ತೆಯ ಕವಿಕಲ್ ಗಂಡಿ ಬಳಿ ಮಣ್ಣು ಜರಿದಿದ್ದು, ಆತಂಕ ಮನೆ ಮಾಡಿದೆ. ಹೆಚ್ಚು ಕುಸಿಯದಂತೆ ಸುರಕ್ಷತಾ ಕ್ರಮಗಳನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಕೈಗೊಂಡಿದ್ದು, ಮರಳು ಮೂಟೆಗಳನ್ನು ಜೋಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.