ADVERTISEMENT

ಚಿಕ್ಕಮಗಳೂರು: ಕೊಪ್ಪ ಪಟ್ಟಣ ಸಮೀಪಕ್ಕೇ ಬಂದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 8:14 IST
Last Updated 13 ಸೆಪ್ಟೆಂಬರ್ 2025, 8:14 IST
   

ಚಿಕ್ಕಮಗಳೂರು: ಕೊಪ್ಪ ಪಟ್ಟಣದ ಸಮೀಪಕ್ಕೇ ಎರಡು ಕಾಡಾನೆಗಳು ಬಂದಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಬಾಳಗಡಿ ಸಮೀಪ ಟೈಲ್ಸ್ ಅಂಗಡಿಯ ಸಮೀಪವೇ ಆನೆಗಳು ಹಾದು ಹೋಗಿವೆ. ಎನ್.ಆರ್.ಪುರ ತಾಲ್ಲೂಕು ಮೇಲ್ಪಾಲ್ ಕಡೆಯಿಂದ ಬಂದಿರುವ ಈ ಆನೆಗಳು ಬಾಳಗಡಿ ಜನವಸತಿ ಪ್ರದೇಶ ಹಾದು ನೀಲಗುಳಿ, ಕುಂಬ್ರಿಉಬ್ಬು ಪ್ರದೇಶದಲ್ಲಿವೆ. ಅರಣ್ಯ ಇಲಾಖೆ ಸಿಬ್ಬಂದಿ ಅವುಗಳ ಚಲನ ವಲನಗಳ ಮೇಲೆ ನಿಗಾ ಇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT