
ನರಸಿಂಹರಾಜಪುರ: ಲಿಟಲ್ ಫ್ಲವರ್ ಕೆಥ್ರೆಡಲ್ ಚರ್ಚ್‌ನಲ್ಲಿ ಆಯೋಜಿಸಿರುವ ಸೇಂಟ್ ಕಿರಿಯ ಕುಸುಮ ಮತ್ತು ಸೇಂಟ್ ಸೆಭಾಸ್ತ್ಯನೊಸ್ ಅವರ ಸಂಯುಕ್ತ ಹಬ್ಬದ ಮಹೋತ್ಸದ ಅಂಗವಾಗಿ ಶನಿವಾರ ಸಂಜೆ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ಮಹೋತ್ಸವದ ಪ್ರಯುಕ್ತ ಚರ್ಚ್‌ನಲ್ಲಿ ಶನಿವಾರ ಬೆಂಗಳೂರಿನ ಫಾದರ್ ಸೆಬಾಸ್ಟಿನ್ ಅವರಿಂದ ಗಾನ ದಿವ್ಯ ಬಲಿಪೂಜೆ, ಸುಸಂದೇಶ ಪ್ರವಚನ ನಡೆಯಿತು.
ವಾದ್ಯಘೋಷ್ಠಿಗಳೊಂದಿಗೆ ರಾಜ ಬೀದಿ ಉತ್ಸವ, ಮೆರವಣಿಗೆಯಲ್ಲಿ ದೀಪಾಲಂಕೃತ ಎತ್ತಿನ ಗಾಡಿ, ಸೇಂಟ್ ಕಿರಿಯ ಕುಸುಮ ಮತ್ತು ಸೇಂಟ್ ಸೆಭಾಸ್ತ್ಯನೊಸ್ ಅವರ ಸ್ತಬ್ಧಚಿತ್ರ ಆಕರ್ಷಣಿಯವಾಗಿತ್ತು.
ನಾಸಿಕ್ ಡೋಲ್, ಚಂಡಮದ್ದಳೆ, ಬ್ಯಾಡ್ ಸೆಟ್, ಸಿಡಿಮದ್ದಿನ ಪ್ರದರ್ಶನ ಮೆರವಣಿಗೆಗೆ ಸೊಬಗು ನೀಡಿದವು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ನಡೆದ ಮೆರವಣಿಗೆಯನ್ನು ರಸ್ತೆಯ ಎರಡು ಕಡೆ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ನಂತರ ಚರ್ಚ್ ಆವರಣದಲ್ಲಿ ಸಿಡಿಮದ್ದಿನ ಪ್ರದರ್ಶನ, ಸಾಮೂಹಿಕ ಅನ್ನಸಂತರ್ಪಣೆ, ನಂತರ ಕೇರಳದ ಟಿ.ವಿ ಮತ್ತು ಚಲನಚಿತ್ರ ಕಲಾವಿದರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.