ADVERTISEMENT

ಬಣಕಲ್ ಗ್ರಾ.ಪಂ ವತಿಯಿಂದ ಸ್ವಚ್ಚತಾ ಆಂದೋಲನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 14:31 IST
Last Updated 1 ಅಕ್ಟೋಬರ್ 2023, 14:31 IST
ಬಣಕಲ್ ಗ್ರಾ.ಪಂ ವತಿಯಿಂದ ಬಣಕಲ್ ಪೇಟೆಯಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.ಗ್ರಾ.ಪಂ.ಪಿಡಿಒ ಬಿ.ಎನ್ ಕೃಷ್ಣಪ್ಪ, ಸದಸ್ಯರು ಇದ್ದರು
ಬಣಕಲ್ ಗ್ರಾ.ಪಂ ವತಿಯಿಂದ ಬಣಕಲ್ ಪೇಟೆಯಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.ಗ್ರಾ.ಪಂ.ಪಿಡಿಒ ಬಿ.ಎನ್ ಕೃಷ್ಣಪ್ಪ, ಸದಸ್ಯರು ಇದ್ದರು   

ಕೊಟ್ಟಿಗೆಹಾರ: ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಸ್ವಚ್ಛತೆಯೇ ಸೇವೆ ಅಭಿಯಾನ ನಡೆಯಿತು.

ಗ್ರಾಮ ಪಂಚಾಯಿತಿ ಪಿಡಿಒ ಬಿ.ಎನ್. ಕೃಷ್ಣಪ್ಪ ಮಾತನಾಡಿ 'ಸ್ವಚ್ಛತಾ ಹಿ ಸೇವಾ ಅಭಿಯಾನವು ಸ್ವಚ್ಛತೆಗಾಗಿ ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮಾರ್ ಮಾತನಾಡಿ 'ಈ ಅಭಿಯಾನವು ವ್ಯಕ್ತಿಗಳು, ಸಮುದಾಯಗಳು ಮತ್ತು ಸರ್ಕಾರಿ ಸಂಸ್ಥೆಗಳು ಸಮಾನ ದೃಷ್ಟಿಯೊಂದಿಗೆ ಒಗ್ಗೂಡಿದಾಗ ಮತ್ತು ಸ್ವಚ್ಛತೆಯನ್ನು ಸಮರೋಪಾದಿಯಲ್ಲಿ ಮಾಡಿದಾಗ ಗಮನಾರ್ಹ ಸಾಧನೆಗಳನ್ನು ಸಾಧಿಸಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ' ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.