ADVERTISEMENT

ನಾಮಪತ್ರ ಪರಿಶೀಲನೆ: 197 ಕ್ರಮಬದ್ಧ, 16 ತಿರಸ್ಕೃತ

ಚಿಕ್ಕಮಗಳೂರು ನಗರಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 5:17 IST
Last Updated 17 ಡಿಸೆಂಬರ್ 2021, 5:17 IST

ಚಿಕ್ಕಮಗಳೂರು: ನಗರಸಭೆ ಚುನಾವಣೆ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಿತು. ಸಲ್ಲಿಕೆಯಾಗಿದ್ದ ಒಟ್ಟು 213 ನಾಮಪತ್ರಗಳಲ್ಲಿ 16 ತಿರಸ್ಕೃತವಾಗಿವೆ, 197 ಕ್ರಮಬದ್ಧವಾಗಿವೆ.

ಒಟ್ಟು 194 ಮಂದಿ 213 ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 10 ಮಂದಿಯ 16 ತಿರಸ್ಕೃತವಾಗಿವೆ. 184 ಮಂದಿಯ 197 ಕ್ರಮಬದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಡಿ.18 ಕಡೆ ದಿನವಾಗಿದೆ. 27ರಂದು ಮತದಾನ ನಡೆಯಲಿದೆ.

ಮತಯಾಚಣೆ ಕಸರತ್ತು ಶುರು: ಎಲ್ಲ ವಾರ್ಡ್‌ಗಳಲ್ಲಿ ಮತಯಾಚನೆ ಕಸರತ್ತು ಆರಂಭವಾಗಿದೆ. ಪಕ್ಷಗಳಲ್ಲಿ ಟಿಕೆಟ್‌ ಕೈತಪ್ಪಿದವರು ಅಸಮಾಧಾನಗೊಂಡಿದ್ದಾರೆ. ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮೂಲಕ ಅತೃಪ್ತಿ ಹೊರಹಾಕಿದ್ದಾರೆ. ಅತೃಪ್ತರನ್ನು ಸಮಾಧಾನಪಡಿಸುವ ಕಾಯಕದಲ್ಲಿ ನಾಯಕರು ತೊಡಗಿದ್ದಾರೆ.

ADVERTISEMENT

ಹೊಂದಾಣಿಕೆಗೆ ಸಿದ್ಧವಾಗಿರುವುದಾಗಿ ಜೆಡಿಎಸ್‌ ಹೇಳಿದೆ. ನಾಮಪತ್ರಗಳ ವಾಪಸ್‌ ಪ್ರಕ್ರಿಯೆ ಮುಗಿಯುವವರೆಗೆ ಕಾದು ನೋಡಲು ಕೆಲವು ಪಕ್ಷಗಳು ಮೌನವಾಗಿರಲು ನಿರ್ಧರಿಸಿವೆ. ಸ್ಪರ್ಧಿಸದ ಕಡೆ ಯಾರನ್ನು ಬೆಂಬಲಿಸಿದರೆ ಅನುಕೂಲ ಎಂಬ ನಿಟ್ಟಿನಲ್ಲಿ ಕೆಲವು ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ. ಪಕ್ಷೇತರರನ್ನು ಬೆಂಬಲಿಸಿ ಗೆದ್ದರೆ ‘ಬುಟ್ಟಿ’ಗೆ ಹಾಕಿಕೊಳ್ಳುವ ತಂತ್ರಗಳತ್ತಲೂ ಚಿತ್ತ ಹರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.