
ನರಸಿಂಹರಾಜಪುರ: ‘ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿಯೂ ಕಂಪ್ಯೂಟರ್ ಜ್ಞಾನ ಅಗತ್ಯ ಇರುವುದರಿಂದ ಪ್ರತಿಯೊಬ್ಬರೂ ಕಂಪ್ಯೂಟರ್ ಕಲಿಯಬೇಕು’ ಎಂದು ರಾಜ್ಯ ಪಾರಂಪಾರಿಕ ವೈದ್ಯರ ಕೌನ್ಸಿಲ್ ಅಧ್ಯಕ್ಷೆ ಕಲ್ಪನಾ ಹೇಳಿದರು.
ಪಟ್ಟಣದ ಎಕ್ಸೆಲ್ ಕಂಪ್ಯೂಟರ್ ಸಭಾಂಗಣದಲ್ಲಿ ಶನಿವಾರ ಚೈತನ್ಯ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ‘ಕಂಪ್ಯೂಟರ್ ಹಾಗೂ ಟೈಲರಿಂಗ್‌ನ ಕೌಶಲ ತರಬೇತಿ’ ಪಡೆದ 60 ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಕೌಶಲ ತರಬೇತಿ ನೀಡಲಾಗುತ್ತಿದೆ. ಟೈಲರಿಂಗ್‌ನಲ್ಲೂ ಗ್ಲಾಸ್‌ವರ್ಕ್, ಪೈಂಟಿಂಗ್, ಎಂಬ್ರಾಯಿಡ್ ಡಿಸೈನ್ ಮಾಡಬಹುದು. ಸಿಕ್ಕ ಅವಕಾಶಗಳನ್ನು ಮಹಿಳೆಯರು ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು’ ಎಂದರು.
ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದರು. ಎಕ್ಸಲ್ ಕಂಪ್ಯೂಟರ್‌ನ ವ್ಯವಸ್ಥಾಪಕ ವರ್ಕಾಟೆ ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಸಕ್ತ ಮಹಿಳೆಯರಿಗೆ ಪ್ರತಿವರ್ಷ ಉಚಿತವಾಗಿ ಟೈಲರಿಂಗ್ ಹಾಗೂ ಕಂಪ್ಯೂಟರ್‌ನ ಕೌಶಲ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಹಿಳೆಯರು ಇದರಿಂದ ಉತ್ತಮ ಜೀವನ ಕಟ್ಟಕೊಳ್ಳಬೇಕು ಎಂದರು. ಕಂಪ್ಯೂಟರ್ ಶಿಕ್ಷಕಿಯರಾದ ಶೃತಿ ಸುಧಾಕರ್, ಪೃಥ್ವಿ, ಟೈಲರಿಂಗ್ ಶಿಕ್ಷಕಿ ಸಹನಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.