ADVERTISEMENT

‘ಸಹಕಾರ ಸಚಿವಾಲಯ ರಚನೆ; ಮೋದಿ ಕೊಡುಗೆ’

ಶಾಸಕ ಬೆಳ್ಳಿ ಪ್ರಕಾಶ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 4:13 IST
Last Updated 9 ಜುಲೈ 2021, 4:13 IST
ಬೆಳ್ಳಿ ಪ್ರಕಾಶ್‌
ಬೆಳ್ಳಿ ಪ್ರಕಾಶ್‌   

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ‘ಸಹಕಾರ ಸಮೃದ್ಧಿ’ ದೃಷ್ಟಿಕೋನ ಇಟ್ಟುಕೊಂಡು ಸಹಕಾರ ಸಚಿವಾಲಯ ರಚನೆ ಮಾಡಿರುವುದು ದೇಶದ ಸಹಕಾರಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಎಂದು ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಶಾಸಕ ಬೆಳ್ಳಿ ಪ್ರಕಾಶ್‌ ಹೇಳಿದ್ದಾರೆ.

‘ಸಹಕಾರ ಸಂಸ್ಥೆಗಳನ್ನು ಬಲಪಡಿಸಲು ಪ್ರತ್ಯೇಕವಾದ ಆಡಳಿತ, ಕಾನೂನು, ನೀತಿ ಚೌಕಟ್ಟನ್ನು ರಚಿಸಲು ಸಹಕಾರ ಸಚಿವಾಲಯ ರೂಪುರೇಷೆ ಸಿದ್ಧಪಡಿಸಲಿದೆ. ರಾಷ್ಟ್ರದ ಸಹಕಾರ ಚಳವಳಿಗೆ ವರದಾನವಾಗಲಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಭಾರತದಲ್ಲಿ ಸಹಕಾರ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ದೇಶದ ಮೊದಲ ಸಹಕಾರ ಸಂಘವು ರಾಜ್ಯದ
ಗದಗ ಜಿಲ್ಲೆಯ ಕಣಗಿನಾಳ ಗ್ರಾಮದಲ್ಲಿ 1905ರಲ್ಲಿ ನೋಂದಾಯಿತವಾಯಿತು. ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಅವರು ಸಂಸ್ಥಾಪಕರ ಅಧ್ಯಕ್ಷರಾಗಿದ್ದರು. ಅವರು ದೇಶದ ಸಹಕಾರ ಚಳವಳಿಯ ಆದ್ಯ ಪ್ರವರ್ತಕರಾಗಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

‘ಸಹಕಾರಿ ಬ್ಯಾಂಕ್‌ಗಳಿಂದಾಗಿ ಗ್ರಾಮೀಣ ಭಾರತದ ಕೃಷಿಕರು, ಬಡ ಜನರು ಹಾಗೂ ಮಹಿಳೆಯರಲ್ಲಿ ಆರ್ಥಿಕ ಸಾಮರ್ಥ್ಯ, ಆತ್ಮವಿಶ್ವಾಸ ವೃದ್ಧಿಸುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.