ADVERTISEMENT

ಚಿಕ್ಕಮಗಳೂರು: ಕೋವಿಡ್‌ನಿಂದ ಇಬ್ಬರು ಸಾವು, 210 ಮಂದಿಗೆ ದೃಢ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 16:01 IST
Last Updated 1 ಸೆಪ್ಟೆಂಬರ್ 2020, 16:01 IST

ಚಿಕ್ಕಮಗಳೂರು: ಕೋವಿಡ್‌ನಿಂದಾಗಿ ಮಂಗಳವಾರ ಇಬ್ಬರು ಮೃತಪಟ್ಟಿದ್ದಾರೆ. 210 ಮಂದಿಗೆ ಸೋಂಕು ದೃಢಪಟ್ಟಿದ್ದು, 67ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತರೀಕೆರೆಯ ಬೇಗಾರಯ್ಯ ಬೀದಿಯ 78 ವರ್ಷದ ಪುರುಷ (ಪಿ– 313155), ತ್ಯಾಗರಾಜನಗರದ89 ವರ್ಷದ ಪುರುಷ (ಪಿ–290109) ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ತರೀಕೆರೆ– 71, ಚಿಕ್ಕಮಗಳೂರು– 60,ಕಡೂರು –35, ಎನ್‌.ಆರ್‌.ಪುರ ಮತ್ತು ಮೂಡಿಗೆರೆ– ತಲಾ 16, ಕೊಪ್ಪ–11, ಶೃಂಗೇರಿ – ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ADVERTISEMENT

ಜಿಲ್ಲೆಯಲ್ಲಿ 1328 ಸಕ್ರಿಯ ಪ್ರಕರಣಗಳು ಇವೆ. 2792 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 76 ಮಂದಿ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಸಾವಿಗೀಡಾಗಿದ್ದಾರೆ.

ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. 1,267 ನಿಯಂತ್ರಿತ ವಲಯಗಳು ಇವೆ.

810 ಮಂದಿ ಮಾದರಿ ಸಂಗ್ರಹ

ಕೊರೊನಾ ವೈರಾಣು ಸೋಂಕು ಪರೀಕ್ಷೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಂಗಳವಾರ 810 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿ ಸಂಗ್ರಹಿಸಲಾಗಿದೆ. ಮಂಗಳವಾರದ ವರದಿಯಲ್ಲಿ 533 ಮಂದಿಗೆ ನೆಗೆಟಿವ್‌ ಬಂದಿದೆ. 940ಮಾದರಿ ಪರೀಕ್ಷಾ ವರದಿ ಬಾಕಿ ಇದೆ. 785ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಪಟ್ಟಿ

ಜಿಲ್ಲೆಯಲ್ಲಿ ಒಟ್ಟು: 4261

ದಿನದ ಏರಿಕೆ: 210

ಸಕ್ರಿಯ ಪ್ರಕರಣ: 1328

ದಿನದ ಏರಿಕೆ: 141

ಗುಣಮುಖ: 2792

ದಿನದ ಏರಿಕೆ: 75

ಸಾವು: 76

ದಿನದ ಏರಿಕೆ: 02

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.