ADVERTISEMENT

ಕೋವಿಡ್-19 | ವಿಚಾರಣಾಧೀನ ಕೈದಿ ಸಹಿತ ಇಬ್ಬರಿಗೆ ಸೋಂಕು ಪತ್ತೆ

ಸಕ್ರಿಯ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 16:45 IST
Last Updated 19 ಜೂನ್ 2020, 16:45 IST
   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಚಾರಣಾಧೀನ ಕೈದಿ ಸೇರಿದಂತೆ ಇಬ್ಬರಿಗೆ ಶುಕ್ರವಾರ ಕೋವಿಡ್‌ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿದೆ.

ಉಡುಪಿ ಜಿಲ್ಲೆಯ ಕುಂದಾಪುರದಿಂದ ತರೀಕೆರೆ ತಾಲ್ಲೂಕಿಗೆ ಬಂದಿದ್ದ ಪುರುಷ ( ಪಿ–8019) ಹಾಗೂ ಚಿಕ್ಕಮಗಳೂರಿನ ಕಾರಾಗೃಹದ ವಿಚಾರಣಾಧೀನ ಕೈದಿ 20 ವರ್ಷದ ಪುರುಷಗೆ (ಪಿ–8020) ಸೋಂಕು ಪತ್ತೆಯಾಗಿದೆ. ಇವರಿಬ್ಬರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಿ, ಮಾದರಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 167 ಮಂದಿಯ ಗಂಟಲಿನ ದ್ರವ ಮತ್ತು ಮೂಗಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಶುಕ್ರವಾರ ರವಾನಿಸಲಾಗಿದೆ. 152 ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ದೃಢಪಟ್ಟಿಲ್ಲ. 298 ಮಂದಿಯ ವರದಿ ಬರಬೇಕಿದೆ. 167ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ADVERTISEMENT

ಮಹಿಳೆ ಕೋವಿಡ್‌ ಆಸ್ಪತ್ರೆಗೆ ದಾಖಲು
ಕುವೈತ್‌ನಿಂದ ಉಡುಪಿಗೆ ಬಂದಿಳಿದು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಗ್ರಾಮಕ್ಕೆ ಬಂದಿದ್ದ ಮಹಿಳೆಯೊಬ್ಬರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀತಜ್ವರ ಮಾದರಿ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿದ್ದವು ಹೀಗಾಗಿ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚಿಕ್ಕಮಗಳೂರು ಕೊವಿಡ್‌–19 ಪ್ರಕರಣ ಅಂಕಿಅಂಶ
ಆರೋಗ್ಯ ತಪಾಸಣೆ:
167
ಹೋಂ ಕ್ವಾರಂಟೈನ್‌ ಇರುವವರು: 264
ಗುಣಮುಖ ಆದವರು: 17
ಮೃತಪಟ್ಟವರು: 01
ಹೋಂ ಕ್ವಾರಂಟೈನ್‌ ಪೂರ್ಣ: 68
ಪರೀಕ್ಷೆಗೆ ಕಳಿಸಿದ ಮಾದರಿ: 4508
ವರದಿ ಪಾಸಿಟಿವ್‌: 26
ವರದಿ ನೆಗೆಟಿವ್‌: 4210

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.