ADVERTISEMENT

ವಿದ್ಯಾರ್ಥಿನಿ ಸಾವು: ಮುಂದುವರಿದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 2:28 IST
Last Updated 12 ಮಾರ್ಚ್ 2021, 2:28 IST

ಉಳ್ಳಾಲ: ಕುಂಪಲದ ಆಶ್ರಯ ಕಾಲೊನಿಯ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರ ವಶದಲ್ಲಿರುವ ಆಕೆಯ ಗೆಳೆಯ ಸೇರಿದಂತೆ ಇಬ್ಬರ ವಿಚಾರಣೆ ಗುರುವಾರವೂ ಮುಂದುವರಿದಿದೆ. ಪ್ರಕರಣದ ಹಿಂದೆ ಗಾಂಜಾ ವ್ಯಸನಿಗಳ ಕೈವಾಡದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಶ್ರಯ ಕಾಲೊನಿ ಪರಿಸರದ ಐದು ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರೇಕ್ಷಾ ನಿಗೂಢ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿರುವ ಪೋಷಕರು, ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿ ಸಿದ್ದಾರೆ. ಮಗಳ ಸಾವಿಗೆ ನ್ಯಾಯ ದೊರ ಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸ್ ವಶದಲ್ಲಿರುವ ಮುಂಡೋಳಿಯ ಯತೀನ್ ರಾಜ್, ಆಶ್ರಯ ಕಾಲೊನಿ ನಿವಾಸಿ ಸೌರವ್ ಮತ್ತು ಸುಹಾನ್ ವಿಚಾರಣೆ ಮುಂದುವರಿದಿದೆ. ಈ ನಡುವೆ ಯತೀನ್‌ ರಾಜ್‌ ಹಾಗೂ ಪ್ರೇಕ್ಷಾ ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರು ಜತೆಗಿರುವ ಹಾಗೂ ಹುಟ್ಟುಹಬ್ಬವನ್ನು ಜೊತೆಯಾಗಿ ಆಚರಿಸಿರುವ ವಿಡಿಯೊ, ಫೋಟೋಗಳು ವೈರಲ್ ಆಗಿವೆ.

ADVERTISEMENT

ಮೃತ ಪ್ರೇಕ್ಷಾ ಅಂತಿಮ ಸಂಸ್ಕಾರ ಗುರುವಾರ ತೊಕ್ಕೊಟ್ಟುವಿನಲ್ಲಿ ನಡೆಯಿತು. ಮನೆಯ ಹಿಂಬಾಗಿಲ ಚಿಲಕ ಮುರಿದಿರುವುದು, ಪ್ರೇಕ್ಷಾಳಿಗೆ ಸೇರಿದ ಮೊಬೈಲ್ ರ‍್ಯಾಕ್‌ನಲ್ಲಿ ಪತ್ತೆಯಾಗಿರುವ ಕುರಿತು ಅನುಮಾನಗಳು ಇವೆ. ಆದರೆ ಆಸ್ಪತ್ರೆ ಪ್ರಾಥಮಿಕ ಹಂತದ ವರದಿಯಲ್ಲಿ ಪ್ರೇಕ್ಷಾಳದ್ದು ಆತ್ಮಹತ್ಯೆ ಎನ್ನುವುದು ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿ ಶವ ಮಹಜರು ವರದಿ ಬಳಿಕವಷ್ಟೇ ಗೊತ್ತಾಗಲಿದೆ.

ಯತೀನ್ ರಾಜ್ ಜತೆಗಿನ ಸ್ನೇಹ ಮತ್ತು ಪ್ರೇಕ್ಷಾ ಫೋಟೊ ಶೂಟ್ ವಿಚಾರಕ್ಕೆ ಸಂಬಂಧಿಸಿ ಮನೆಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಪ್ರೇಕ್ಷಾಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಮಾ.7 ರಂದು ಮನೆ ಸಮೀಪ ನಡೆದಿದ್ದ ಜಾತ್ರೆಯಲ್ಲಿ ಯತೀನ್ ರಾಜ್ ಮತ್ತು ಪ್ರೇಕ್ಷಾ ಜತೆಗೆ ಇದ್ದರು. ಪ್ರೇಕ್ಷಾ ಬೆಂಗಳೂರಿಗೆ ತೆರಳುವ ವಿಚಾರ ವಾಗಿ ಜಾತ್ರೆಯಲ್ಲಿ ಇಬ್ಬರಿಗೂ ಜಗಳವಾ ಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುಡ್ ಬೈ ಸಂದೇಶ: ಗೆಳೆಯ ಯತೀನ್ ರಾಜ್‌ಗೆ ಕೊನೆ ಗಳಿಗೆಯಲ್ಲಿ ಗುಡ್ ಬೈ ಸಂದೇಶ ಹಾಕಿರುವುದು ಮೊಬೈಲ್ ಪರಿಶೀಲಿಸಿದಾಗ ಪತ್ತೆಯಾಗಿದೆ. 5 ನಿಮಿಷಗಳ ವಿಡಿಯೊ ಕಾಲ್ ಮಾಡಿರು ವುದಾಗಿಯೂ ತಿಳಿದುಬಂದಿದೆ.

ನೀರಿನಲ್ಲಿ ಶವ ಪತ್ತೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಏನೆಕಲ್ಲು ಗ್ರಾಮದ ಚಿಕ್ಕನ ಮಜಲು ಕುಶಾಲಪ್ಪ ಪೂಜಾರಿ (48) ಅವರ ಶವ ಗುರುವಾರ ನದಿಯಲ್ಲಿ ಪತ್ತೆಯಾಗಿದೆ. ಮೃತರಿಗೆ ಪತ್ನಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ, ಇಬ್ಬರು ಪುತ್ರರು ಇದ್ದಾರೆ.

ಲೈಂಗಿಕ ಕಿರುಕುಳ

ಉಜಿರೆ: ಬೆಳ್ತಂಗಡಿ ತಾಲ್ಲೂಕು ಕಲ್ಮಂಜ ಗ್ರಾಮದ ನಿಡಿಗಲ್‌ ಎಂಬಲ್ಲಿ ಯುವಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಆರೋಪಿಯನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಮಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಹತ್ತನೇ ತರಗತಿ ಬಾಲಕಿಗೆ ಇನ್‌ಸ್ಟ್ರಾಗ್ರಾಂನಲ್ಲಿ ಆರೋಪಿ ಪರಿಚಿತ ನಾಗಿದ್ದ. ಬುಧವಾರ ಬಾಲಕಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನೆ.

8 ಮಂದಿಗೆ ಗಾಯ

ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ರೋಡ್ ಬಳಿಯ ಕಲ್ಲುಗುಡ್ಡೆ ಬಳಿ ಗುರುವಾರ ಸ್ಕಾರ್ಪಿಯೊ ಅಪಘಾತವಾಗಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಒಟ್ಟು 8 ಮಂದಿಗೆ ಗಾಯಗಳಾ ಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದ ಟಯರ್ ಸಿಡಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಪಕ್ಕದಲ್ಲಿದ್ದ ಮನೆಗೂ ಹಾನಿಯಾಗಿದೆ.

ಗೋಡಂಬಿ ಸಿಲುಕಿ ಮಗು ಸಾವು

ಪುತ್ತೂರು: ಗೋಡಂಬಿ ಬೀಜ ಗಂಟಲಲ್ಲಿ ಸಿಲುಕಿ ಮೂರೂವರೆ ವರ್ಷದ ಮಗುವೊಂದು ಬುಧವಾರ ಮೃತಪಟ್ಟಿದೆ.

ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಸಮೀಪದ ಉರಮಾಲ್ ನಿವಾಸಿ ಇಸಾಕ್ ಅವರ ಮೂರೂವರೆ ವರ್ಷದ ಪುತ್ರ ಮೃತಪಟ್ಟಿದ್ದಾನೆ. ಬುಧವಾರ ಮನೆಯಲ್ಲಿ ಮಗು ಗೋಡಂಬಿ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿಕೊಂಡಿತ್ತು. ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

₹1.10 ಕೋಟಿ ಮೌಲ್ಯದ ಚಿನ್ನ ವಶ

ಮಂಗಳೂರು: ಒಳ ಉಡುಪಿನಲ್ಲಿ ₹1.10 ಕೋಟಿ ಮೌಲ್ಯದ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳದ ಕಾಸರಗೋಡಿನ ಮೊಹಮ್ಮದ್ ಅಲಿ ಸಮೀರಾ ಬಂಧಿತ ಮಹಿಳೆ ಸಮೀರಾ ದುಬೈನಿಂದ ಅಕ್ರಮ ಚಿನ್ನ ಮತ್ತು ವಿದೇಶಿ ಸಿಗರೇಟ್‌ಗಳನ್ನು ತನ್ನ ಒಳ ಉಡುಪು, ಸ್ಯಾನಿಟರಿ ಪ್ಯಾಡ್, ಸಾಕ್ಸ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಮೀರಾ ಅವರನ್ನು ಗುಪ್ತಚರ ಮಾಹಿತಿಯಂತೆ ತಪಾಸಣೆಗೆ ಒಳಪಡಿಸಿದಾಗ, ₹1.10 ಕೋಟಿ ಮೌಲ್ಯದ 2.41 ಕೆ.ಜಿ. ಚಿನ್ನ ಪತ್ತೆಯಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.