ADVERTISEMENT

ದಸರಾ ಉದ್ಘಾಟನೆ; ಏಕತೆಯ ಸಂದೇಶ: ನಾಗೇಶ್ ಅಂಗೀರಸ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:07 IST
Last Updated 26 ಸೆಪ್ಟೆಂಬರ್ 2025, 5:07 IST
ನಾಗೇಶ ಅಂಗೀರಸ
ನಾಗೇಶ ಅಂಗೀರಸ   

ಚಿಕ್ಕಮಗಳೂರು: ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರಿಂದ ಉದ್ಘಾಟಿಸಿ ಕೋಮು ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಭಾವೈಕ್ಯತೆ ಸಂದೇಶವನ್ನು ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ನಾಗೇಶ್ ಅಂಗೀರಸ ಹೇಳಿದರು.

ವಿರೋಧದ ನಡುವೆ ಬಾನು ಮುಸ್ತಾಕ್ ಅವರು ನಡೆದುಕೊಂಡ ರೀತಿ ಸಮಾಜದ ಗಮನ ಸೆಳೆದಿದೆ. ವಿಶೇಷವಾಗಿ ಮುಸ್ಲಿಂ ಸಮಾಜದ ಮಹಿಳೆಯ ಈ ನಡೆ ಮಾದರಿಯಾಗಿದ್ದು, ಸಮಾಜದ ವೈಚಾರಿಕ ಬೆಳವಣಿಗೆಗೆ ನಾಂದಿ ಹಾಡಬಲ್ಲದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮತ ಬ್ಯಾಂಕ್, ಸಮುದಾಯದ ಓಲೈಕೆ, ಒಡೆದಾಳುವ ಬ್ರಿಟಿಷ್‌ ನೀತಿಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಲಹೀನತೆ. ಈ ಎಲ್ಲಾ ಆಪವಾದಗಳ‌ ನಡುವೆ ಇಂತಹ ಬದಲಾವಣೆ ರಚನಾತ್ಮಕವಾಗಿ ಗಟ್ಟಿಗೊಳ್ಳಬೇಕು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.