ADVERTISEMENT

ಡಿ.1ರಿಂದ 4 ದಿನ ಮುಳ್ಳಯ್ಯನಗಿರಿ ಪ್ರವಾಸಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 23:48 IST
Last Updated 18 ನವೆಂಬರ್ 2025, 23:48 IST
ಮುಳ್ಳಯ್ಯನಗಿರಿ 
ಮುಳ್ಳಯ್ಯನಗಿರಿ    

ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿ.2ರಿಂದ ದತ್ತ ಜಯಂತಿ ನಡೆಯಲಿದೆ. ಡಿ.1ರಿಂದ ನಾಲ್ಕು ದಿನ ಮುಳ್ಳಯ್ಯನಗಿರಿ ಸುತ್ತಮುತ್ತಲ ಪ್ರದೇಶಗಳಿಗೆ ಬೇರೆ ಪ್ರವಾಸಿಗರ ಭೇಟಿಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

ಡಿ.2ರಿಂದ 4ರವರೆಗೆ ಮೂರು ದಿನ ದತ್ತ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ವಿವಿಧೆಡೆಯಿಂದ ಸಾವಿರಾರು ಮಾಲಾಧಾರಿ ಭಕ್ತರು ಭೇಟಿ ನೀಡುವರು. ಹೀಗಾಗಿ, ಬಾಬಾಬುಡನ್‌ ಗಿರಿಸ್ವಾಮಿ ದರ್ಗಾ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಝರಿ ಜಲಪಾತ, ಮಾಣಿಕ್ಯಧಾರಾ ಜಲಪಾತ ಹಾಗೂ ಗಾಳಿಕೆರೆಗೆ ಬೇರೆ ಪ್ರವಾಸಿಗರು ಬರುವುದನ್ನು ಡಿ.1ರ ಬೆಳಿಗ್ಗೆ 6ರಿಂದ ಡಿ.5ರ ಬೆಳಿಗ್ಗೆ 10 ಗಂಟೆ ತನಕ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT