
ದತ್ತಮಾಲಾ ಅಭಿಯಾನ
ಚಿಕ್ಕಮಗಳೂರು: ಶ್ರೀರಾಮ ಸೇನೆ ನೇತೃತ್ವದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಈ ಬಾರಿ ‘ದತ್ತಪೀಠ ಸೇವಾ ಸಮಿತಿ’ ಹೆಸರಿನಲ್ಲಿ ಆರಂಭವಾಗಿದೆ.
ಶ್ರೀರಾಮ ಸೇನೆಯಿಂದ ನವೆಂಬರ್‌ನಲ್ಲಿ ಅಭಿಯಾನ ನಡೆಯುತ್ತಿತ್ತು. ಡಿಸೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ದತ್ತ ಜಯಂತಿ ನಡೆಸಲಾಗುತ್ತಿತ್ತು. ಈ ಮೂರು ಸಂಘಟನೆಗಳು ಒಟ್ಟಾಗಿ ನಡೆಸಲು ಉದ್ದೇಶಿಸಿದ್ದು, ಶ್ರೀರಾಮ ಸೇನೆಯಲ್ಲಿದ್ದ ಮುಖಂಡರೇ ದತ್ತಪೀಠ ಸೇವಾ ಸಮಿತಿ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.
'ಗುರುವಾರ ಮಾಲೆ ಧಾರಣೆ ಮಾಡಿದ್ದು, ನ.31 ರಂದು ದತ್ತ ದೀಪೋತ್ಸವ ನಡೆಯಲಿದೆ.
ಹಲವು ವರ್ಷಗಳಿಂದ ಪ್ರತ್ಯೇಕವಾಗಿ ನಡೆದಿರುವ ಕಾರ್ಯಕ್ರಮ ನಿಲ್ಲಬಾರದು ಎಂಬ ಕಾರಣಕ್ಕೆ ನಡೆಸಲಾಗುತ್ತಿದೆ' ಎಂದು ಸೇವಾ ಸಮಿತಿ ಮುಖ್ಯಸ್ಥ ರಂಜಿತ್ ಶೆಟ್ಟಿ ತಿಳಿಸಿದ್ದಾರೆ. ದತ್ತಮಾಲೆ ಧಾರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.