
ಸೀತೂರು (ನರಸಿಂಹರಾಜಪುರ): ದೇಶದಲ್ಲಿ ಶೇ 70ರಷ್ಟು ಇದ್ದ ರೈತರ ಪ್ರಮಾಣ ಪ್ರಸ್ತುತ ಶೇ 55ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ ಬಸವರಾಜಪ್ಪ ಹೇಳಿದರು.
ತಾಲ್ಲೂಕಿನ ಸೀತೂರು ಗ್ರಾಮದಲ್ಲಿ ಆಯೋಜಿಸಿರುವ ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಶಿಬಿರದಲ್ಲಿ ಸೋಮವಾರ ಭಾವೈಕ್ಯತೆಯ ದಿನ ಕಾರ್ಯಕ್ರಮದಲ್ಲಿ ಭಾರತ ದೇಶದ ಕೃಷಿಯ ಬಗ್ಗೆ ಅವರು ಮಾತನಾಡಿದರು.
ಕಳೆದ ವರ್ಷ ಏರಿಕೆ ಕಂಡಿದ್ದ ಕಾಫಿ ಬೆಲೆ ಈ ವರ್ಷ ಕುಸಿದಿದೆ. ವಿದ್ಯಾವಂತರಾದ ಮಕ್ಕಳು ಹಳ್ಳಿಗೆ ಬಂದು ಕೃಷಿ ಮಾಡುತ್ತಿಲ್ಲ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಅಡಿಕೆ ಬೆಳೆಗೆ ರೋಗ ತಗುಲಿದೆ ಎಂದರು.
ಸೀತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಎನ್.ಎಸ್.ಎಸ್.ನಂತಹ ಶಿಬಿರಗಳು ಅವಶ್ಯಕವಾಗಿವೆ ಎಂದರು.
ಪತ್ರಕರ್ತ ಯಡಗೆರೆ ಮಂಜುನಾಥ್ ದಿನ ಪತ್ರಿಕೆ ಮಹತ್ವ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಲ್ಲೇ ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಪುರುಷೋತ್ತಮ್, ಕಲಾವಿದ ಅಭಿನವ ಗಿರಿರಾಜ್, ಗುತ್ತಿಗೆದಾರ ಶ್ರೀನಿವಾಸ್, ಗುತ್ತಿಗೆದಾರ ಪ್ರವೀಣ್ ಶೆಟ್ಟಿ, ಎಸ್.ಡಿ.ಎಂ.ಸಿ ಸದಸ್ಯ ರವಿ, ಉಪನ್ಯಾಸಕ ಪ್ರಶಾಂತ್ ಕುಮಾರ್, ವಿದ್ಯಾರ್ಥಿಗಳಾದ ಅಕಾಶ್, ನಿಶ್ಮಿತಾ, ಸಂಜಯ್ ಇದ್ದರು. ನಂತರ ಗ್ರಾಮಸ್ಥರು ಹಾಗೂ ಎನ್.ಎಸ್.ಎಸ್.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.