ADVERTISEMENT

ಚಿಕ್ಕಮಗಳೂರು: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:03 IST
Last Updated 13 ಮೇ 2025, 15:03 IST
ನಾಗೇಶ್ ಅಂಗೀರಸ
ನಾಗೇಶ್ ಅಂಗೀರಸ   

ಚಿಕ್ಕಮಗಳೂರು: ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವಂತೆ ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆ ಹಾಗೂ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಪ್ರಜ್ಞಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗೀರಸ ಹೇಳಿದರು.

‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಒಕ್ಕೂಟ ವ್ಯವಸ್ಥೆ ಹೊಂದಿರುವ ಭಾರತದ ಸಂವಿಧಾನವು ಒಂದು ಪ್ರಧಾನಿ, ಒಂದು ರಾಷ್ಟ್ರಪತಿ, ಒಂದೇ ರೀತಿಯ ಕರೆನ್ಸಿ, ಮಿಲಿಟರಿ ವ್ಯವಸ್ಥೆ ಇರುವಂತೆ ನೋಡಿಕೊಂಡಿದೆ. ಕಾನೂನುಗಳು ಜಾತಿಗೆ ಅನುಗುಣವಾಗಿ ಬದಲಾಗಿರುವುದು ಭಾರತದ ಒಟ್ಟು ಬೆಳವಣಿಗೆಯ ಹಿನ್ನಡೆಗೆ ಕಾರಣವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆ ಅನಿವಾರ್ಯ ಎಂದು ದೆಹಲಿ ಹೈಕೋರ್ಟ್ 2021 ಜು.10ರಲ್ಲಿ ಹೇಳಿದೆ. ನ್ಯಾಯಾಲಯಗಳು ಪದೇ ಪದೇ ಲೋಪಗಳನ್ನು ಎತ್ತಿ ತೋರಿಸುತ್ತಿವೆ. ಆದರೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸರ್ಕಾರಗಳು ಆಸಕ್ತಿ ತೋರಿಸುತ್ತಿಲ್ಲ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.