ಮೂಡಿಗೆರೆ ಬಸ್ ನಿಲ್ದಾಣದ ಬಳಿ ಅಳವಡಿಸಿರುವ ಫ್ಲೆಕ್ಸ್
ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದ ಬಳಿ ಬ್ಯಾನರ್, ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಇವುಗಳನ್ನು ತೆರವುಗೊಳಿಸಬೇಕಿದೆ.
ಬಸ್ ನಿಲ್ದಾಣದ ಆವರಣ ಕಾಣದಂತೆ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದು, ನಿಲ್ದಾಣದ ಒಳಗೆ ಖಾಸಗಿ ವಾಹನಗಳು ಬರಬಾರದು ಎಂಬ ನಿಯಮವಿದ್ದರೂ ಬೈಕ್, ಕಾರುಗಳನ್ನು ಒಳಗೆ ತರಲಾಗುತ್ತದೆ. ಚಿಕ್ಕಮಗಳೂರು ಕಡೆಯಿಂದ ಬಸ್ ಚಾಲನೆ ಮಾಡಿಕೊಂಡು ಒಳ ಪ್ರವೇಶಿಸುವಾಗ ಬ್ಯಾನರ್, ಫ್ಲೆಕ್ಸ್‌ನಿಂದಾಗಿ ಸಣ್ಣ ವಾಹನಗಳು ಚಾಲಕರಿಗೆ ಕಾಣದೇ ಅಪಘಾತಗಳು ಸಂಭವಿಸುತ್ತಿವೆ.
ಬಸ್ ನಿಲ್ದಾಣದ ಆವರಣದಲ್ಲಿ ಕಡುಕರ ಹಾವಳಿಯೂ ಹೆಚ್ಚಾಗಿದ್ದು, ಆಲ್ದೂರು, ಚಿಕ್ಕಮಗಳೂರು ಫ್ಲಾಟ್ ಫಾರಂಗಳಲ್ಲಿ ಮದ್ಯಪಾನ ಮಾಡಿ ಬಿದ್ದಿದ್ದರೂ ಬ್ಯಾನರ್, ಫ್ಲೆಕ್ಸ್‌ಗಳಿಂದಾಗಿ ಹತ್ತಿರ ಬರುವವರೆಗೂ ಅವರು ಕಾಣುವುದಿಲ್ಲ. ಹಲವು ಬಾರಿ ನಿಲ್ದಾಣದ ಅಧಿಕಾರಿಗಳಿಗೆ ದೂರು ನೀಡಿದರೂ ಹೊರ ಆವರಣವು ನಮಗೆ ಸಂಬಂಧಿಸಿದ್ದಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಅಪಘಾತ ಸಂಭವಿಸಿದಾಗ ಮಾತ್ರ ಯಾರೂ ಹೊಣೆಗಾರರಾಗುವುದಿಲ್ಲ. ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಬ್ಯಾನರ್ ತೆರವುಗೊಳಿಸಲು ಮುಂದಾಗಬೇಕು. ಬಸ್ ನಿಲ್ದಾಣದ ಬಳಿ ಬ್ಯಾನರ್ ಅಳವಡಿಸದಂತೆ ಕ್ರಮ ಕೈಗೊಂಡು ಅಪಘಾತಗಳನ್ನು ತಪ್ಪಿಸಬೇಕಿದೆ.
– ಚೆಲುವರಾಯಸ್ವಾಮಿ, ಚಾಲಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.