ಕಡೂರು: ತಾಲ್ಲೂಕು ಕೃಷಿಕ ಸಮಾಜದ 2025ರಿಂದ 2030ರ ಅವಧಿ ತನಕ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ 15 ಜನರು ಅವಿರೋಧವಾಗಿ ಆಯ್ಕೆಯಾದರು.
15 ಸದಸ್ಯ ಬಲದ ಕೃಷಿಕ ಸಮಾಜದ ನಿರ್ದೇಶಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಲು ಡಿ. 6 ಕೊನೆ ದಿನ ಹಾಗೂ ನಾಮಪತ್ರ ವಾಪಸ್ ಪಡೆಯಲು ಡಿ. 9 ಕಡೆ ದಿನವಾಗಿತ್ತು. ಡಿ. 15ರಂದು ಚುನಾವಣೆ ನಿಗದಿಯಾಗಿತ್ತು.
ನಾಮಪತ್ರ ಯಾರೂ ವಾಪಸ್ ಪಡೆಯದೇ ಇರುವುದರಿಂದ ಹಾಗೂ ಸಲ್ಲಿಕೆಯಾದ ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ಎಲ್ಲ ಉಮೇದುವಾರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೃಷಿ ಸಹಾಯಕ ನಿರ್ದೇಶಕ ಎಂ. ಅಶೋಕ್ ಹೇಳಿದರು.
ಜಿ.ಕೆ.ರಂಗನಾಥ್ (ಗೌಡನಕಟ್ಟೆಹಳ್ಳಿ), ಎಚ್.ಎಲ್.ಶೇಖರಪ್ಪ (ಕಡೂರು), ಪಿ.ಎಂ.ಸತೀಷ್ (ಪಂಚನಹಳ್ಳಿ), ಲಿಂಗದೇವರು (ಕುಂಕಾನಾಡು), ಕೆ.ಎಂ.ಮಲ್ಲೇಶ್ (ಕುಂಕಾನಾಡು), ವಿ.ಎಂ.ರವಿಕುಮಾರ್ (ವಡೇರಹಳ್ಳಿ), ಎಂ.ಕೆ.ಆಶೋಕ್ (ಮಾಚಗೊಂಡನಹಳ್ಳಿ), ಜಿ.ಎಂ.ಈಶ್ವರಪ್ಪ (ಗರ್ಜೆ), ಎಸ್.ಬಿ.ಮಲ್ಲಿಕಾರ್ಜುನಪ್ಪ (ಶೆಟ್ಟಿಹಳ್ಳಿ), ವಿ.ಜಿ.ಅಶೋಕ್ (ವಡೇರಹಳ್ಳಿ), ಕೆ.ಎಚ್.ರೇಣುಕಾರಾಧ್ಯ (ಕುಪ್ಪಾಳು), ಎಸ್.ಎಲ್.ರುದ್ರೇಗೌಡ (ಸರಸ್ವತೀಪುರ), ಕೆ.ಎಂ.ರುದ್ರಪ್ಪ (ಆನಂದಪುರ), ಎಸ್.ಗಂಗಮ್ಮ (ಕುಪ್ಪಾಳು), ಎಂಕೆ.ಚಂದ್ರಪ್ಪ (ಮಚ್ಚೇರಿ) ಅವಿರೋಧವಾಗಿ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.