ADVERTISEMENT

ಮೋಟಾರ್‌ ಕಾರ್‌ ರ್‍ಯಾಲಿ ಜ.25 ಮತ್ತು 26ರಂದು

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 16:39 IST
Last Updated 23 ಜನವರಿ 2025, 16:39 IST
ಭಾಸ್ಕರ್ ಗುಪ್ತ
ಭಾಸ್ಕರ್ ಗುಪ್ತ   

ಚಿಕ್ಕಮಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್‌ ಕ್ಲಬ್‌ ವತಿಯಿಂದ ಡರ್ಟ್‌ ಫಸ್ಟ್‌–2025 ಟೈಮ್ ಅಟ್ಯಾಕ್ ಎಂಬ ಶಿರ್ಷಿಕೆಯಲ್ಲಿ ನಗರದ ಹೊರವಲಯದ ಬಂಡಿಹಳ್ಳಿಯಲ್ಲಿ ಜ.25 ಮತ್ತು 26ರಂದು ಮೋಟಾರ್‌ ಕಾರ್‌ ರ್‍ಯಾಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಮೋಟಾರ್ ಸ್ಪೋರ್ಟ್‌ ಕ್ಲಬ್ ಸದಸ್ಯ ಭಾಸ್ಕರ್ ಗುಪ್ತ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.25ರಂದು ಬೆಳಿಗ್ಗೆ 8 ಗಂಟೆಗೆ ರ್‍ಯಾಲಿ ಆರಂಭವಾಗಲಿದ್ದು, ಕೇರಳ, ಕೊಲ್ಕತ್ತ, ತಮಿಳುನಾಡು, ನಾಗಲ್ಯಾಂಡ್‌ ಸೇರಿ ಹೊರ ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮಹಿಳಾ ಸ್ಪರ್ಧಿಗಳೂ ಪಾಲ್ಗೊಳ್ಳಲಿದ್ದಾರೆ ಎಂದರು.

ರ್‍ಯಾಲಿಯು 10 ವಿಭಾಗದಲ್ಲಿ ನಡೆಯಲಿದ್ದು, ಏಕ ಕಾಲದಲ್ಲಿ ಎರಡು ಕಾರು ಹೋಗುವ ಟ್ವಿನ್ ಟ್ರ್ಯಾಕ್‌ ನಿರ್ಮಾಣ ಮಾಡಲಾಗಿದೆ. ಬೆಸ್ಟ್‌ ಚಾಲಕ ಹಾಗೂ ಫಾಸ್ಟೆಡ್ ಚಾಲಕನಿಗೆ ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಸಿಎಂಎಸ್‌ಸಿ ಕ್ಲಬ್‌ ಅಧ್ಯಕ್ಷ ಅಲ್ಮಸ್ ಅಹಮ್ಮದ್, ವಿಶ್ವಾನಾಥ್, ಸಿದಾರ್ಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.