ADVERTISEMENT

ಶರನ್ನವರಾತ್ರಿ: ದುರ್ಗಾ ಹೋಮ ಇಂದು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:46 IST
Last Updated 3 ಅಕ್ಟೋಬರ್ 2022, 4:46 IST
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ 24ನೇ ವರ್ಷದ ಶರನ್ನವರಾತ್ರಿ ಉತ್ಸವದ ಅಂಗವಾಗಿ ದೇವಿಗೆ ಭಾನುವಾರ ವೀಣಾ ಶಾರದೆ (ಸರಸ್ಪತಿ) ಅಲಂಕಾರ ಮಾಡಲಾಗಿತ್ತು.
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ 24ನೇ ವರ್ಷದ ಶರನ್ನವರಾತ್ರಿ ಉತ್ಸವದ ಅಂಗವಾಗಿ ದೇವಿಗೆ ಭಾನುವಾರ ವೀಣಾ ಶಾರದೆ (ಸರಸ್ಪತಿ) ಅಲಂಕಾರ ಮಾಡಲಾಗಿತ್ತು.   

ನರಸಿಂಹರಾಜಪುರ: ಶರನ್ನವರಾತ್ರಿ ಸೇವಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಶರನ್ನವರಾತ್ರಿ ಮಹೋತ್ಸದ ಅಂಗವಾಗಿ ದೇವಿಯ ಸನ್ನಿಧಿಯಲ್ಲಿ ಇದೇ 3ರಂದು ಸಾಮೂಹಿಕ ದುರ್ಗಾ ಹೋಮ ನಡೆಯಲಿದೆ.

ಭಾನುವಾರ ಬೆಳಿಗ್ಗೆ ತ್ರಿಕಾಲ ಪೂಜೆ ನಡೆಯಿತು. ಸಂಜೆ ಭಾವಸಾರಕ್ಷತ್ರಿಯ ಮಹಿಳಾ ಮಂಡಳಿ, ಸುಂಕದಕಟ್ಟೆ ವಿದ್ಯಾಗಣಪತಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ಪಟ್ಟಣದ ಹಳೇಪೇಟೆ ಗುತ್ತ್ಯಮ್ಮ ದೇವಸ್ಥಾನದಲ್ಲಿ ಇದೇ 3ರಂದು ಕರ್ಕಿ ರಮಾನಂದ ಭಟ್ ನೇತೃತ್ವದಲ್ಲಿ ದುರ್ಗಾ ಹೋಮ ಆಯೋಜಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.