
ಪ್ರಜಾವಾಣಿ ವಾರ್ತೆ
ತರೀಕೆರೆ: ತಾಲ್ಲೂಕಿನ ಅತ್ತಿಗನಾಳು ಮತ್ತು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಅಡಿಕೆ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ನಾಶ ಮಾಡಿವೆ.
ತರೀಕೆರೆಯ ಕೃಷ್ಣಪ್ಪ ರೈತರಿಗೆ ಸೇರಿದ ಅತ್ತಿಗನಾಳು ಗ್ರಾಮದ ಅಡಿಕೆ ತೋಟಕ್ಕೆ ಆನೆಗಳು ನುಗ್ಗಿ ಅಡಿಕೆ ಗಿಡ, ನೀರಾವರಿಗೆ ಅಳವಡಿಸಿದ್ದ ಪೈಪ್‌ಲೈನ್‍ಗಳನ್ನು ಹಾನಿ ಮಾಡಿವೆ.
ಈ ಭಾಗದಲ್ಲಿ ಪದೇ ಪದೇ ಆನೆಗಳು ರೈತರ ಜಮೀನುಗಳಿಗೆ ರಾತ್ರಿ ಸಮಯದಲ್ಲಿ ದಾಳಿ ಮಾಡುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನು ಅರಣ್ಯ ಇಲಾಖೆ ಮಾಡುತ್ತಿಲ್ಲ ಎಂದು ಈ ಭಾಗದ ನೊಂದ ರೈತರು ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.