ADVERTISEMENT

ಚಿಕ್ಕಮಗಳೂರು: ವಿದ್ಯುತ್ ತಂತಿ ಬೇಲಿ ತಗುಲಿ ಆನೆ ಸಾವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 5:39 IST
Last Updated 1 ಆಗಸ್ಟ್ 2021, 5:39 IST

ಚಿಕ್ಕಮಗಳೂರು: ತಾಲ್ಲೂಕಿನ‌ ಮಲ್ಲೇನಹಳ್ಳಿಯ ಗಾಳಿಪೂಜೆ ಪ್ರದೇಶದ ತೋಟವೊಂದರಲ್ಲಿ ವಿದ್ಯುತ್ ಪ್ರವಹಿಸಿದ್ದ ಬೇಲಿ ಸ್ಪರ್ಶಿಸಿ ಆನೆ ಸಾವಿಗೀಡಾಗಿದೆ.

‘ಕಾಫಿ ತೋಟದಲ್ಲಿ ಬೇಲಿಯ ವಿದ್ಯುತ್ ತಾಗಿ ಗಂಡಾನೆಯೊಂದು ಮೃತಪಟ್ಟಿದೆ. ವಯಸ್ಸು 25 ವರ್ಷ ಎಂದು ಅಂದಾಜಿಸಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಭದ್ರಾ ವನ್ಯಜೀವಿ ವಿಭಾಗದ ಡಾ.ಯಶಸ್ ಅವರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.