ಕಡೂರು: ‘ಸಾಮಾಜಿಕವಾಗಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರೆಯಬೇಕೆಂಬ ಆಶಯ ನ್ಯಾಯಾಂಗದ್ದು’ ಎಂದು ಸಿವಿಲ್ ನ್ಯಾಯಾಧೀಶ ಇರ್ಪಾನ್ ಹೇಳಿದರು.
ಕಡೂರು ಹೊರವಲಯದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಗುರುವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ ನೀಡಿದೆ. ದೇಶವಾಸಿಗಳೆಲ್ಲರೂ ಸಮಾನರು. ಅಲ್ಲಿ ಮೇಲು ಕೀಳು, ಧರ್ಮಗಳ ಉಲ್ಲೇಖವಿಲ್ಲ. ಸರ್ವರಿಗೂ ಸಮಪಾಲು- ಸಮಬಾಳು ಎಂಬ ಉದಾತ್ತ ಚಿಂತನೆ ಇದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂವಿಧಾನದ ಬಗ್ಗೆ ಎಲ್ಲರೂ ಅರಿವು ಮೂಡಿಸಿಕೊಳ್ಳಬೇಕು’ ಎಂದರು.
ವಕೀಲ ಎಂ.ಎಸ್.ಹೆಳವರ ಮಾತನಾಡಿ, ‘ಕಾನೂನುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಹೆಚ್ಚು ಗಮನ ಕೊಡಬೇಕು. ಮಾನವೀಯ ಗುಣಗಳನ್ನು ಅವರಲ್ಲಿ ಬೆಳೆಸಬೇಕು’ ಎಂದರು.
ಪ್ರಾಂಶುಪಾಲೆ ಮಂಜುಳಾ ವಿಜಯಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.