ತರೀಕೆರೆ: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ವತಿಯಿಂದ ಪಟ್ಟಣದ ಎ.ಪಿ.ಎಂ.ಸಿ. ಯಾರ್ಡ್‍ನಲ್ಲಿ ಪ್ರತಿಷ್ಠಾಪಿಸಿರುವ 8ನೇ ವರ್ಷದ ಹಿಂದೂ ಮಹಾ ಗಣಪತಿಯನ್ನು ಪಟ್ಟಣದ ರಾಜ ಬೀದಿಗಳಲ್ಲಿ ಶೋಭಾಯಾತ್ರೆ ಮೂಲಕ ಸಾಗಿ ಚಿಕ್ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹಿಂದೂ ಗಣೇಶೋತ್ಸವ ಸಮಿತಿ ಅಧ್ಯಕ್ಷ ಟಿ.ಎಂ. ಭೋಜರಾಜ್ ಹೇಳಿದರು.
ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಅವರು, ‘ನಾಡಿನ ಅಭಿವೃದ್ಧಿ ಮತ್ತು ಶಾಂತಿಗಾಗಿ ಪ್ರತಿವರ್ಷ ಪ್ರತಿಷ್ಠಾಪಿಸುವ ಹಿಂದೂ ಮಹಾ ಗಣಪತಿಯನ್ನು ಈ ಬಾರಿ ಆಪರೇಷನ್ ಸಿಂಧೂರ ಪರಿಕಲ್ಪನೆಯಡಿ ಸಿದ್ಧಗೊಳಿಸಲಾಗಿದೆ’ ಎಂದರು.
ಬುಧವಾರ ಮಧ್ಯಾಹ್ನ 12ಕ್ಕೆ ವಿವಿಧ ಪ್ರಮುಖ ಕಲಾತಂಡ, ಮಹಾರಾಷ್ಟ್ರದ ಉತ್ಸವ್ ನಾಸಿಕ್ ಡೋಲ್ ತಂಡ, ಮಹಿಳಾ ಭಜನ ತಂಡಗಳು ಮತ್ತು ವಾದ್ಯಗೋಷ್ಠಿಗಳೊಂದಿಗೆ ಶೋಭಾಯಾತ್ರೆಯು ಆರಂಭವಾಗಲಿದೆ ಎಂದರು.
ಈ ಶೋಭಾಯಾತ್ರೆಗೆ ಸಂಘ ಪರಿವಾರ, ವಿವಿಧ ರಾಜಕೀಯ ಮತ್ತು ಸಂಸ್ಥೆಗಳ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಮಿಲ್ಟ್ರಿ ಶ್ರೀನಿವಾಸ್, ವಿಎಚ್‍ಪಿ ತಾಲ್ಲೂಕು ಅಧ್ಯಕ್ಷ ಆನಂದ (ಗುಂಡ), ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಜಗದೀಶ್, ತಾಲ್ಲೂಕು ಸಂಚಾಲಕ ಚಂದ್ರಶೇಖರ್, ನಗರ ಸಂಚಾಲಕ ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.