ADVERTISEMENT

ಚಿಕ್ಕಮಗಳೂರು: ಗುತ್ತಿಹಳ್ಳಿ ಹಾಲ್ಟ್‌ ಬಸ್‌ ಸಂಚಾರ ಪುನರರಾಂಭಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:18 IST
Last Updated 10 ಮಾರ್ಚ್ 2021, 2:18 IST
ಗುತ್ತಿಹಳ್ಳಿ ಬಸ್‌ ನಿಲ್ದಾಣ
ಗುತ್ತಿಹಳ್ಳಿ ಬಸ್‌ ನಿಲ್ದಾಣ   

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯಿಂದ ಗುತ್ತಿಹಳ್ಳಿನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ (ಲಾಸ್ಟ್‌, ಹಾಲ್ಟ್‌ ಗಾಡಿ) ಸಂಚಾರವನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಳಿಸಿದ್ದು, ಈವರೆಗೆ ಪುನರಾರಂಭಿಸಿಲ್ಲ. ಈ ಭಾಗದ ಭಾಗದ ಶಾಲಾಕಾಲೇಜು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರಿಗೆ ಓಡಾಟಕ್ಕೆ ಅನಾನುಕೂಲವಾಗಿದೆ.

ಸಂಜೆ 6-45 ರ ಸಮಯದಲ್ಲಿ ಲಾಸ್ಟ್ ಬಸ್ ವ್ಯವಸ್ಥೆ ಇತ್ತು. ಮೂಡಿಗೆರೆಯಿಂದ ಹೊರಟ್ಟಿ, ಸಬ್ಬೇನಹಳ್ಳಿ, ಕೋಳೂರು, ಹಳಿಕೆ, ಬೆಟ್ಟಗೆರೆ, ಜಾರಗಲ್, ತ್ರಿಪುರ, ಕೊಟ್ರಕೆರೆ, ಗುತ್ತಿ, ಹೆಸಗೋಡು ಮಾರ್ಗವಾಗಿ ಗುತ್ತಿಹಳ್ಳಿಗೆ ತಲುಪುತ್ತಿತ್ತು.

ಗುತ್ತಿಹಳ್ಳಿಯಲ್ಲಿ ಹಾಲ್ಟ್ ಆಗಿ ಮರದಿನ ಬೆಳಿಗ್ಗೆ 6 ಗಂಟೆಗೆ ಅಲ್ಲಿದ ಹೊರಟು ವಾಪಸ್‌ ಮಾರ್ಗವಾಗಿ ಮೂಡಿಗೆರೆಗೆ ತಲುಪುತಿತ್ತು. ಈ ಬಸ್‌ ಸಂಚಾರವು ಈ ಭಾಗದ ಭಾಗದ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರಿಗೆ ಬೆಳಿಗ್ಗೆ ಮತ್ತು ಸಂಜೆ ಸಂಚಾರಕ್ಕೆ ಅನುಕೂಲಕವಾಗಿತ್ತು.

ADVERTISEMENT

ಲಾಕ್‌ಡೌನ್‌ ತೆರವುಗೊಳಿಸಲಾಗಿದೆ. ಎಲ್ಲ ಚಟುವಟಿಕೆಗಳು ಬಹುತೇಕ ಸಹಜ ಸ್ಥಿತಿಗೆ ಮರಳಿವೆ. ಶಾಲಾಕಾಲೇಜುಗಳು ಆರಂಭವಾಗಿವೆ. ಗ್ರಾಮೀಣ ಭಾಗದಲ್ಲಿ ಸಾರಿಗೆ ಸಮಸ್ಯೆಯಿಂದಾಗಿ ಪರಿತಪಿಸುವಂತಾಗಿದೆ.

ಗುತ್ತಿಹಳ್ಳಿ ಭಾಗದಲ್ಲಿ ಪ್ರಯಾಣಿಕ ಸಂಚಾರಿ ಖಾಸಗಿ ವಾಹನಗಳ ಕೊರತೆ ಇದೆ. ಲಾಸ್ಟ್ ಬಸ್ ಹಾಗೂ ಫಸ್ಟ್ ಬಸ್‌ ವ್ಯವಸ್ಥೆ ಪ್ರಯಾಣಿಕರಿಗೆ ಅಗತ್ಯವಾಗಿದೆ. ಮತ್ತೆ ಈ ಭಾಗದಲ್ಲಿ ಹಿಂದಿನ ವೇಳಾಪಟ್ಟಿಯಂತೆ ಬಸ್ ಸಂಚಾರವನ್ನು ಪುನರಾರಂಭಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ವಹಿಸಬೇಕು.

– ಡಾ.ಸಂಪತ್ ಬೆಟ್ಟಗೆರೆ, ಲೇಖಕ, ಪ್ರಯಾಣಿಕರು, ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.