ADVERTISEMENT

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 10:25 IST
Last Updated 7 ಮೇ 2024, 10:25 IST
   

ಚಿಕ್ಕಮಗಳೂರು: ಬಿರು ಬಿಸಿಲಿನಿಂದ ಕಂಗಟ್ಟಿದ್ದ ಚಿಕ್ಕಮಗಳೂರು ನಗರದ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಸುರಿದು ತಂಪೆರೆಯಿತು.

ಗುಡುಗು- ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚ ಕಾಲ‌‌ ಮಳೆ ಸುರಿಯಿತು. ಅಪರೂಪದ ಆಲಿಕಲ್ಲು ಮಳೆ ಕಂಡು ಜನ ಸಂಭ್ರಮಿಸಿದರು. ರಸ್ತೆಗಳಲ್ಲಿ ನೀರು ಹರಿಯಿತು. ಮಳೆ ಇಲ್ಲದೆ ಬಿರಿದಿದ್ದ ಇಳೆ ತಂಪಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT