ತರೀಕೆರೆ: ತಾಲ್ಲೂಕಿನ ಅಮೃತಾಪುರ ಗ್ರಾಮದಲ್ಲಿ ತರೀಕೆರೆ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಅಮೃತೇಶ್ವರ ಸಮುದಾಯ ಭವನದಲ್ಲಿ ಕಣ್ಣಿನ ಉಚಿತ ತಪಾಸಣೆ, ಹೃದಯ ಸಂಬಂಧಿತ ಇಸಿಜಿ, ಎಕೊ ಮತ್ತು ಸಾಮೂಹಿಕ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಹಾಗೂ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಮೆಗ್ಗಾನ್ ಬೋಧನ ಆಸ್ಪತ್ರೆ, ನಾರಾಯಣ ಹೆಲ್ತ್ ಮತ್ತು ಸಂಜೀವಿನಿ ಆಸ್ಪತ್ರೆ, ತರೀಕೆರೆ ಗ್ರಾಮ ಪಂಚಾಯಿತಿ, ಅಮೃತಾಪುರ ಮತ್ತು ನೇರಲಕೆರೆ ಸಹಯೋಗದಲ್ಲಿ ನಡೆದ ಶಿಬಿರ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್., ವೈದ್ಯರು ದೇವರ ಸ್ವರೂಪ. ಹಳ್ಳಿಗೆ ಬಂದು ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ 28 ಜನ ರಕ್ತದಾನ ಮಾಡಿದರು. 120 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 87 ಜನ ಇಸಿಜಿ, ಎಕೊ ಪರೀಕ್ಷೆ ಮಾಡಿಸಿಕೊಂಡರು.
ಡಾ. ಕಿರಣ್ ಭೀಮೇಶ್ವರ, ಡಾ. ಅನಸೂಯಾ, ಡಾ. ವರ್ಷ, ಡಾ. ಸ್ವಾತಿ ತಮ್ಮ ಸಿಬ್ಬಂದಿಯೊಂದಿಗೆ ಶಿಬಿರ ನಡೆಸಿಕೊಟ್ಟರು. ಮುಖಂಡರಾದ ರುದ್ರಣ್ಣ, ಶೇಖರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್. ರಾಜಶೇಖರ್, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯದರ್ಶಿ ಮುರಳಿ ಟಿ.ಆರ್. ಸ್ವಾಗತಿಸಿದರು. ಖಜಾಂಚಿ ಹರೀಶ್ ಟಿ.ಎಂ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.