ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ
ನಡೆದ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಕೆ.ಎಸ್.ಆನಂದ್ ಹಸಿರು ಬಾವುಟ ತೋರಿ ಚಾಲನೆ ನೀಡಿದರು
ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾರಾಯಣ ಹೆಲ್ತ್ ಮತ್ತು ವೋಲ್ವೊ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಹಸಿರು ಬಾವುಟ ತೋರಿ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಕೆ.ಎಸ್.ಆನಂದ್, ‘ರಾಜ್ಯದಾದ್ಯಂತ ಈ ಯೋಜನೆ ಜಾರಿಯಲ್ಲಿದ್ದು, ತಿಂಗಳಿನಲ್ಲಿ 4 ತಾಲ್ಲೂಕುಗಳಲ್ಲಿ ಮೊಬೈಲ್ ಕ್ಲಿನಿಕ್‌ನಲ್ಲಿ ಇಸಿಜಿ, ಎಕೋ ಸೇವೆಗಳು, ಸರ್ವಿಕಲ್ ಮತ್ತು ಮ್ಯಾಮೋಗ್ರಾಮ್ ಮೂಲಕ ಸ್ತನ ಕ್ಯಾನ್ಸರ್‌ಗೆ ತಪಾಸಣೆ, ರಕ್ತಪರೀಕ್ಷೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ತಜ್ಞ ವೈದ್ಯರ ಸಲಹೆಯನ್ನು ಕೊಡಿಸುತ್ತಿರುವುದು ಜನಸಾಮಾನ್ಯರಿಗೆ ಸಹಕಾರಿಯಾಗಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾರಾಯಣ ಹೆಲ್ತ್‌ನ ವ್ಯವಸ್ಥಾಪಕ ದೇವರಾಜ ನಾಯ್ಕ್, ‘ಒಂಬತ್ತು ಜಿಲ್ಲೆಗಳಲ್ಲಿ ಶಿಬಿರಗಳನ್ನು ಮುಗಿಸಿ, ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಪಾಸಣೆ ಕೈಗೊಂಡಿದ್ದೇವೆ. ಗುರುವಾರ ಅಜ್ಜಂಪುರದಲ್ಲಿ ಶಿಬಿರ ನಡೆಯಲಿದೆ. ನಂತರದ ದಿನಗಳಲ್ಲಿ ಹೋಬಳಿ ಮಟ್ಟಕ್ಕೂ ಆರೋಗ್ಯ ಸೇವೆ ವಿಸ್ತರಿಸಲಾಗುವುದು’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ದತ್ತಾತ್ರಿ, ‘ಸೂಪರ್ ಸ್ಪೆಷಾಲಿಟಿ ಸ್ಕ್ರೀನಿಂಗ್ ಸೇವೆಗಳು ಸರ್ಕಾರಿ ಸಹಭಾಗಿತ್ವದಲ್ಲಿ ಮನೆ ಬಾಗಿಲಿಗೆ ಬಂದಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು. ಶಿಬಿರದಲ್ಲಿ 80 ಜನರಿಗೆ ರಕ್ತ ತಪಾಸಣೆ, ಇಸಿಜಿ, 30 ಜನರಿಗೆ ಎಕೋ ಪರೀಕ್ಷೆ, 30 ಜನರಿಗೆ ಮ್ಯಾಮೊಗ್ರಾಮ್, 9 ಜನರಿಗೆ ಕಾಲ್ಪೊಸ್ಕೋಪಿ ಪರೀಕ್ಷೆ ನಡೆಸಲಾಯಿತು.
ಹೃದ್ರೋಗ ತಜ್ಞ ಡಾ.ಸಿದ್ದಾರ್ಥ್ ಎಸ್.ವಂಟೆ ನೇತೃತ್ವದಲ್ಲಿ ನಾರಾಯಣ ಹೆಲ್ತ್‌ನ ವೈದ್ಯರು ಮತ್ತು ಸಿಬ್ಬಂದಿ ತಪಾಸಣೆ ಕೈಗೊಂಡರು. ವೋಲ್ವೊ ಗ್ರೂಪ್‌ನ ವ್ಯವಸ್ಥಾಪಕ ರಘು, ಕಡೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದಾ ದೀಪಕ್, ಡಾ.ಕಿರಣ್, ಡಾ.ರೀಟಾ, ಡಾ.ನೇಹಾ, ಸಿಬ್ಬಂದಿ ಚಂದ್ರೇಗೌಡ, ಕುಮಾರಿಬಾಯಿ, ಮಮತಾ, ಭಾರತಿ ಇದ್ದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾರಾಯಣ ಹೆಲ್ತ್ ಮತ್ತು ವೋಲ್ವೊ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಹಸಿರು ಬಾವುಟ ತೋರಿ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಕೆ.ಎಸ್.ಆನಂದ್, ‘ರಾಜ್ಯದಾದ್ಯಂತ ಈ ಯೋಜನೆ ಜಾರಿಯಲ್ಲಿದ್ದು, ತಿಂಗಳಿನಲ್ಲಿ 4 ತಾಲ್ಲೂಕುಗಳಲ್ಲಿ ಮೊಬೈಲ್ ಕ್ಲಿನಿಕ್‌ನಲ್ಲಿ ಇಸಿಜಿ, ಎಕೋ ಸೇವೆಗಳು, ಸರ್ವಿಕಲ್ ಮತ್ತು ಮ್ಯಾಮೋಗ್ರಾಮ್ ಮೂಲಕ ಸ್ತನ ಕ್ಯಾನ್ಸರ್‌ಗೆ ತಪಾಸಣೆ, ರಕ್ತಪರೀಕ್ಷೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ತಜ್ಞ ವೈದ್ಯರ ಸಲಹೆಯನ್ನು ಕೊಡಿಸುತ್ತಿರುವುದು ಜನಸಾಮಾನ್ಯರಿಗೆ ಸಹಕಾರಿಯಾಗಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾರಾಯಣ ಹೆಲ್ತ್‌ನ ವ್ಯವಸ್ಥಾಪಕ ದೇವರಾಜ ನಾಯ್ಕ್, ‘ಒಂಬತ್ತು ಜಿಲ್ಲೆಗಳಲ್ಲಿ ಶಿಬಿರಗಳನ್ನು ಮುಗಿಸಿ, ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಪಾಸಣೆ ಕೈಗೊಂಡಿದ್ದೇವೆ. ಗುರುವಾರ ಅಜ್ಜಂಪುರದಲ್ಲಿ ಶಿಬಿರ ನಡೆಯಲಿದೆ. ನಂತರದ ದಿನಗಳಲ್ಲಿ ಹೋಬಳಿ ಮಟ್ಟಕ್ಕೂ ಆರೋಗ್ಯ ಸೇವೆ ವಿಸ್ತರಿಸಲಾಗುವುದು’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ದತ್ತಾತ್ರಿ, ‘ಸೂಪರ್ ಸ್ಪೆಷಾಲಿಟಿ ಸ್ಕ್ರೀನಿಂಗ್ ಸೇವೆಗಳು ಸರ್ಕಾರಿ ಸಹಭಾಗಿತ್ವದಲ್ಲಿ ಮನೆ ಬಾಗಿಲಿಗೆ ಬಂದಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು. ಶಿಬಿರದಲ್ಲಿ 80 ಜನರಿಗೆ ರಕ್ತ ತಪಾಸಣೆ, ಇಸಿಜಿ, 30 ಜನರಿಗೆ ಎಕೋ ಪರೀಕ್ಷೆ, 30 ಜನರಿಗೆ ಮ್ಯಾಮೊಗ್ರಾಮ್, 9 ಜನರಿಗೆ ಕಾಲ್ಪೊಸ್ಕೋಪಿ ಪರೀಕ್ಷೆ ನಡೆಸಲಾಯಿತು.
ಹೃದ್ರೋಗ ತಜ್ಞ ಡಾ.ಸಿದ್ದಾರ್ಥ್ ಎಸ್.ವಂಟೆ ನೇತೃತ್ವದಲ್ಲಿ ನಾರಾಯಣ ಹೆಲ್ತ್‌ನ ವೈದ್ಯರು ಮತ್ತು ಸಿಬ್ಬಂದಿ ತಪಾಸಣೆ ಕೈಗೊಂಡರು. ವೋಲ್ವೊ ಗ್ರೂಪ್‌ನ ವ್ಯವಸ್ಥಾಪಕ ರಘು, ಕಡೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದಾ ದೀಪಕ್, ಡಾ.ಕಿರಣ್, ಡಾ.ರೀಟಾ, ಡಾ.ನೇಹಾ, ಸಿಬ್ಬಂದಿ ಚಂದ್ರೇಗೌಡ, ಕುಮಾರಿಬಾಯಿ, ಮಮತಾ, ಭಾರತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.