ಕಳಸ: ತಾಲ್ಲೂಕಿನಾದ್ಯಂತ ಶನಿವಾರ ಧಾರಾಕಾರ ಮಳೆ ಸುರಿದಿದೆ.
ಅವಧಿಗೆ ಮುನ್ನವೇ ಆರಂಭವಾದ ಮಳೆಗಾಲ ಕೃಷಿ ಕಾರ್ಯಕ್ಕೆ ಅಡ್ಡಿ ತಂದಿದೆ. ಭದ್ರಾನದಿಯಲ್ಲಿ ನೀರಿನ ಮಟ್ಟ ಏರುತ್ತಿದೆ. ಚಳಿ ಶುರುವಾಗಿದ್ದು, ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಸತತ ಮಳೆ–ಗಾಳಿಯಿಂದ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಆಗಿದೆ. ವಿದ್ಯುತ್ ಕಡಿತದಿಂದ ಜನರ ದೈನಂದಿನ ಜೀವನಕ್ಕೆ ಬಹಳ ಸಂಕಷ್ಟ ಆಗಿತ್ತು. ಕಳಸ, ಹಳುವಳ್ಳಿ, ಹೆಮ್ಮಕಿ, ಮರಸಣಿಗೆ, ಹೊರನಾಡು, ಬಲಿಗೆ ಪ್ರದೇಶದಲ್ಲಿ ಕಳೆದ ಎರಡು ದಿನಗಳಲ್ಲಿ 100ರಿಂದ 250 ಮಿ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.