
ಪ್ರಜಾವಾಣಿ ವಾರ್ತೆ
ಕಳಸ: ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆ ಆಲಿಕಲ್ಲು ಸಹಿತ ರಭಸದ ಮಳೆಯಾಗಿದೆ.ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಗುಡುಗು ಮಿಂಚಿನ ಆರಂಭವಾದ ಮಳೆ ಅರ್ಧ ಗಂಟೆ ಧಾರಾಕಾರವಾಗಿ ಸುರಿಯಿತು. ಕಳೆದೆರಡು ವಾರಗಳಿಂದ ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪು ನೀಡಿತು.
ಮಳೆಯಾದ್ದರಿಂದ ಕಾಫಿ, ಅಡಿಕೆ ತೋಟಗಳಲ್ಲಿ ತೇವಾಂಶ ಹೆಚ್ಚಿದೆ. ಬಿಸಿಲಿನಿಂದ ಹಲವೆಡೆ ಹಸಿರು ಒಣಗತೊಡಗಿತ್ತು. ಮಳೆ ಕೃಷಿಕರಲ್ಲಿ ಭರವಸೆ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.