ADVERTISEMENT

ನರಸಿಂಹರಾಜಪುರ | ಭಾರಿ ಮಳೆ: ಕೆರೆ ದಂಡೆ ಒಡೆದು ರಸ್ತೆಗೆ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:08 IST
Last Updated 21 ಅಕ್ಟೋಬರ್ 2024, 14:08 IST
ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯ ಸೂಸಲವಾನಿ ಗ್ರಾಮದಿಂದ ಗೇರುಬೈಲು ಹೋಗುವ ರಸ್ತೆಗೆ ಹಾನಿಯಾಗಿದೆ
ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯ ಸೂಸಲವಾನಿ ಗ್ರಾಮದಿಂದ ಗೇರುಬೈಲು ಹೋಗುವ ರಸ್ತೆಗೆ ಹಾನಿಯಾಗಿದೆ   

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಒಂದು ಗಂಟೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ರಭಸದ ಮಳೆಯಿಂದ ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸಲವಾನಿ ಗ್ರಾಮದಿಂದ ಗೇರುಬೈಲು ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ಕೆರೆ ದಂಡೆ ಒಡೆದು, ನೀರು ಹರಿದು ರಸ್ತೆಗೆ ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರ ಸಂಜೆ ತುಂತುರು ಮಳೆ ಸುರಿಯಿತು.

ಭಾನುವಾರದಿಂದ ಸೋಮವಾರ ಬೆಳಿಗ್ಗೆವರೆಗೆ 24 ಗಂಟೆಗಳ ಅವಧಿಯಲ್ಲಿ ನರಸಿಂಹರಾಜಪುರದಲ್ಲಿ 4.32 ಸೆಂ.ಮೀ, ಮೇಗರಮಕ್ಕಿಯಲ್ಲಿ 4.2 ಸೆಂ.ಮೀ ಹಾಗೂ ಬಾಳೆಹೊನ್ನೂರಿನಲ್ಲಿ 2.4 ಸೆಂ.ಮೀ ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.