ಕಡೂರು: ‘ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ವರ್ಗ (ಎಸ್.ಟಿ) ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅ. 22ರಂದು ಬೆಳಿಗ್ಗೆ 10.30ಕ್ಕೆ ಸಖರಾಯಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಜಿಲ್ಲಾ ಕಾಡುಗೊಲ್ಲರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಡಿ. ಪ್ರಭುದೇವ ತಿಳಿಸಿದರು.
‘ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಕಾಡುಗೊಲ್ಲರ ಸಂಘಟನೆ ನಡೆಯುತ್ತಿದೆ. ಈಗಿರುವ ಪ್ರವರ್ಗ-1ರ ಮೀಸಲಾತಿಯನ್ನು ಬದಲಾಯಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದರು.
ಶಾಸಕ ಸಿ.ಟಿ. ರವಿ ಸಮಾವೇಶವನ್ನು ಉದ್ಘಾಟಿಸುವರು. ಕುಲದೈವ ಜುಂಜಪ್ಪ ಭಾವಚಿತ್ರವನ್ನು ಶಾಸಕ ಡಿ.ಎಸ್. ಸುರೇಶ್ ಅನಾವರಣ ಮಾಡುವರು. ಶಾಸಕ ಬೆಳ್ಳಿಪ್ರಕಾಶ್ ಪುಷ್ಪಾರ್ಚನೆ ಮಾಡುವರು. ರಾಜಣ್ಣ ಅಧ್ಯಕ್ಷತೆ ವಹಿಸುವರು ಎಂದರು.
ಕಾಡುಗೊಲ್ಲರು ಅತಿ ಹಿಂದುಳಿದ ಸಮುದಾಯವಾಗಿದ್ದು, ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿದರೆ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಜಿ. ಎಚ್. ಈರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ತಿರುಮಲ ದೇವರಹಟ್ಟಿ ದಾನೇಶ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಕಾರ್ಯಾಧ್ಯಕ್ಷ ದೇವಿರಪ್ಪ, ಮುಖಂಡರಾದ ಕೃಷ್ಣಮೂರ್ತಿ, ಲೋಕೇಶ್, ಪ್ರಕಾಶ್ ಕಾಡುಗೊಲ್ಲ, ಚಿತ್ರಕುಮಾರ್, ಚಂದ್ರೇಗೌಡ್ರು, ಕೆ.ಸ್ವಾಮಿ, ಕಲ್ಕೆರೆ ಬಸವರಾಜು, ದಾಸಪ್ಪ, ಶಾಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.