ADVERTISEMENT

ಕೊಪ್ಪ | ಕಾಡುಕೋಣ ಶಿಕಾರಿ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:16 IST
Last Updated 13 ಸೆಪ್ಟೆಂಬರ್ 2025, 6:16 IST
<div class="paragraphs"><p>ಬಂಧನ </p></div>

ಬಂಧನ

   

ಕೊಪ್ಪ: ಇಲ್ಲಿನ ಕೊಪ್ಪ ಎಸ್ಟೇಟ್‌ನಲ್ಲಿ ಕಾಡುಕೋಣ ಶಿಕಾರಿ ಮಾಡಿದ ಆರೋಪದ ಮೇಲೆ ರಾಘವೇಂದ್ರ ನಗರದ ಇಸ್ಮಾಯಿಲ್ ಎಂಬುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಎಸ್ಟೇಟ್‌ನಲ್ಲಿ 10 ವರ್ಷದ ಕಾಡುಕೋಣ ಶಿಕಾರಿ ಮಾಡಿ ಮಾಂಸ ಬೇರ್ಪಡಿಸಿ, ಆರೋಪಿ ಮನೆಗೆ ಕೊಂಡೊಯ್ದಿದ್ದ. ಎಸ್ಟೇಟ್‌ನಲ್ಲಿ ಕಾರ್ಮಿಕರು ಕೆಲಸದ ವೇಳೆ ಕಾಡುಕೋಣ ಕಳೇಬರ ಗಮನಿಸಿದ್ದರು. ಎಸ್ಟೇಟ್ ಮಾಲೀಕರ ದೂರನ್ನು ಆಧರಿಸಿ ಅರಣ್ಯಾಧಿಕಾರಿಗಳು ಆರೋಪಿ ಮನೆ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕ 4 ಕೆ.ಜಿಯಷ್ಟು ಮಾಂಸ ವಶಕ್ಕೆ ಪಡೆದುಕೊಂಡು, ಮಾಂಸ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.