ADVERTISEMENT

ಕಡೂರು: ಕಂದಾಯ ಇಲಾಖೆಯ ಜನಸಂಪರ್ಕ ಸಭೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:41 IST
Last Updated 23 ಫೆಬ್ರುವರಿ 2026, 6:41 IST
<div class="paragraphs"><p>ಸಭೆ </p></div>

ಸಭೆ

   

ಕಡೂರು: ತಾಲ್ಲೂಕು ಮಟ್ಟದ ಕಂದಾಯ ಇಲಾಖೆಯ ಜನಸಂಪರ್ಕ ಸಭೆ ಮಂಗಳವಾರ (ಫೆ. 24) ಕಡೂರು ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕ ಕೆ.ಎಸ್‌. ಆನಂದ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಹಶೀಲ್ದಾರ್‌ ಕಚೇರಿ ಪ್ರಕಟಣೆ ತಿಳಿಸಿದೆ.

ಜನಸಂಪರ್ಕ ಸಭೆಗೆ ಕಂದಾಯ ಇಲಾಖೆಯ ವಿಷಯಗಳಿಗೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸುವವರು ತಮ್ಮ ಹೋಬಳಿ ವ್ಯಾಪ್ತಿಯ ನಾಡಕಚೇರಿಗಳಲ್ಲಿ ಸೋಮವಾರ ಸಂಜೆಯೊಳಗೆ ಅರ್ಜಿ ಸಲ್ಲಿಸಬಹುದು. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದವರು ಸಭೆ ನಡೆಯುವ ದಿನ ಬೆಳಿಗ್ಗೆ 9.30ರಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ತಮ್ಮ ಮನವಿ ಸಲ್ಲಿಸಬಹುದು. ವೈಯಕ್ತಿಕ ಅಹವಾಲು ಸಲ್ಲಿಸುವವರು ಒಬ್ಬರೇ ಅರ್ಜಿ ಸಲ್ಲಿಸಬಹುದು, ಸಾಮಾಜಿಕವಾಗಿ ಅಹವಾಲನ್ನು ಸಲ್ಲಿಸಲು ಇಬ್ಬರಿಗೆ ಅವಕಾಶವಿದೆ. ಸಾರ್ವಜನಿಕರು ತಮ್ಮ ಕೋರಿಕೆ ಅರ್ಜಿ ಸಲ್ಲಿಸಿದ ಬಳಿಕ ಟೋಕನ್‌ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.