ADVERTISEMENT

ಭೂಮಿ ಕೇಂದ್ರದಲ್ಲಿ ಅವ್ಯವಹಾರ?

ಹಿಂದಿನ ತಹಶೀಲ್ದಾರ್‌ ಹೆಬ್ಬೆಟ್ಟು ಗುರುತು ಬಳಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 2:10 IST
Last Updated 9 ಫೆಬ್ರುವರಿ 2021, 2:10 IST

ಕಡೂರು: ಇಲ್ಲಿನ ತಾಲೂಕು ಕಚೇರಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂಮಿ ಕೇಂದ್ರದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡುವ ನೆಪದಲ್ಲಿ ಕೆಲ ವ್ಯಕ್ತಿಗಳಿಗೆ ಭೂಮಿ ಮಂಜೂರು ಮಾಡಿದ್ದು, ಮಂಜೂರು ಮಾಡಲು ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ತಹಶೀಲ್ದಾರರ ಹೆಬ್ಬೆಟ್ಟು ಗುರುತು ಬಳಕೆ ಆಗಿರುವುದು ಅಚ್ಚರಿ ತಂದಿದೆ.

ಸಾಮಾನ್ಯವಾಗಿ ಸರ್ಕಾರಿ ಭೂಮಿ ಅರ್ಹ ವ್ಯಕ್ತಿಗಳಿಗೆ ಮಂಜೂರು ಮಾಡಬೇಕಾದರೆ ಬಗರು ಹುಕುಂ ಸಮಿತಿಯ 3 ಸಭೆಗಳ ಮೂಲಕ ಪರಿಶೀಲನೆ ನಡೆಸಿ, ಆ ವ್ಯಕ್ತಿಯ ಕಡತ ಅರ್ಹತೆ ಇದ್ದರೆ ಅನುಮೋದನೆ ಗೊಳ್ಳುತ್ತದೆ. ಆನಂತರ ಹಕ್ಕು ಬದಲಾವಣೆಯ ಸೂಚನೆ ಫಲಾನುಭ ವಿಗೆ ತಲುಪಿದ ನಂತರ ಪಹಣಿ ಬದಲಾವಣೆಗೆ ಸೂಚನೆ ನೀಡಿರುವ ಕಡತ ಭೂಮಿ ಕೇಂದ್ರಕ್ಕೆ ಬರುತ್ತದೆ. ಗ್ರಾಮಲೆಕ್ಕಿಗರು ಲಾಗಿನ್ ಮೂಲಕ ಅನುಮತಿ ನೀಡಿ, ನಂತರ ಕಂದಾಯ ನಿರೀಕ್ಷಕರ ಅಭಿಪ್ರಾಯ ಪಡೆದ ಮೇಲೆ ತಹಶೀಲ್ದಾರ್ ಹೆಬ್ಬೆಟ್ಟು ಗುರುತು ನೀಡಿ ಅನುಮೋದಿಸಿದ ನಂತರವೇ ಪಹಣಿ ಫಲಾನುಭವಿಯ ಕೈಸೇರುತ್ತದೆ.

ADVERTISEMENT

2018ರ ಮಾರ್ಚ್ 28ರಿಂದ ಜೂನ್ 21ರ ತನಕ 3 ತಿಂಗಳು ಕಡೂರು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಎಚ್. ವಿಶ್ವನಾಥ್ ಹೆಸರಿ ನಲ್ಲಿ ಈಗ ಭೂಮಿ ಕೇಂದ್ರದಲ್ಲಿ ಕಡತ ಗಳ ಮತ್ತು ಹೆಬ್ಬೆಟ್ಟು ಗುರುತು ನೀಡಿ ಲಾಗಿನ್ ಆಗುವ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೊಡ್ಡ ಅನುಮಾನ ವ್ಯಕ್ತವಾಗಿದೆ.

ಈಗಾಗಲೇ ಸುಮಾರು 25ಕ್ಕೂ ಹೆಚ್ಚು ಪಹಣಿ ಮತ್ತು ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಈ ಸಂಗತಿ ಭೂಮಿ ಕೇಂದ್ರದ ಬೆಂಗಳೂರು ನಿರ್ವಹಣಾ ಕೇಂದ್ರದ ಅಧಿಕಾರಿಗಳ ಗಮನಕ್ಕೂ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.