
ಕಳಸ: ತಾಲ್ಲೂಕಿನ ಕೆಲ ರಸ್ತೆಗಳು ಮತ್ತು ಸೇತುವೆ ಕಾಮಗಾರಿಗಳಿಗೆ ಶಾಸಕಿ ನಯನಾ ಮೋಟಮ್ಮ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಮೊದಲಿಗೆ ಸಂಸೆ-ಎಳನೀರು ರಸ್ತೆ ದುರಸ್ತಿಯ ₹80 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಆನಂತರ ನೆಲ್ಲಿಬೀಡು ಸೇತುವೆಗೆ ಭೂಮಿಪೂಜೆ ನೆರವೇರಿಸಿದರು. ₹2.5 ಕೋಟಿ ವೆಚ್ಚದ ಈ ಕಾಮಗಾರಿ ಬಗ್ಗೆ ಸ್ಥಳೀಯರು ಅನೇಕ ವರ್ಷಗಳಿಂದ ನಿರೀಕ್ಷೆ ಹೊಂದಿದ್ದರು. ಆದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಅಲ್ಲಿ ನೆರೆದು ಶಾಸಕಿಯನ್ನು ಅಭಿನಂದಿಸಿದರು.
ಕಳಸ-ಕೊಟ್ಟಿಗೆಹಾರ ರಸ್ತೆಯ ಹಿರೇಬೈಲಿನಿಂದ ಮರಸಣಿಗೆ ರಸ್ತೆಯ ₹2 ಕೋಟಿ ವೆಚ್ಚದ ಕಾಮಗಾರಿಗೂ ಹಸಿರು ನಿಶಾನೆ ತೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಮುಖಂಡರಾದ ಪ್ರಭಾಕರ್, ರಾಜೇಂದ್ರ, ರಫೀಕ್, ವೀರೇಂದ್ರ, ಶ್ರೀಪಾಲಯ್ಯ, ಜಯಂತ್, ಶುಕೂರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.