ಚಿಕ್ಕಮಗಳೂರು: ಜಿಲ್ಲೆಯಲ್ಲೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ಸಂಚಾರಗಳು ಎಂದಿನಂತೆ ಇದ್ದರೆ, ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಕನ್ನಡ ಸೇನೆ ಕಾರ್ಯಕರ್ತರು ಬಸ್ ನಿಲ್ದಾಣ, ಐ.ಜಿ.ರಸ್ತೆ ಮತ್ತು ಎಂ.ಜಿ.ರಸ್ತೆಗಳಲ್ಲಿ ಸಂಚರಿಸಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು. ಬಸ್ ನಿಲ್ದಾಣದಲ್ಲಿ ತೆರೆದಿದ್ದ ಹೋಟೆಲ್ ಮುಚ್ಚಿಸಲು ಪ್ರಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಬಲವಂತ ಮಾಡದಂತೆ ಸೂಚಿಸಿದರು.
ಹಿರೇಮಗಳೂರಿನಿಂದ ಬೈಕ್ ರ್‍ಯಾಲಿ ನಡೆಸಿದರು. ಕೋಟೆ ಬಡಾವಣೆ ಬಳಿ ತೆರೆದಿದ್ದ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿ ಮುಚ್ಚುವಂತೆ ಮನವಿ ಮಾಡಿದರು. ಬಸ್ ನಿಲ್ದಾಣ ರಸ್ತೆಯಲ್ಲಿ ಬಸ್ ಒಂದನ್ನು ತಡೆದು ಚಾಲಕನಿಗೆ ಕನ್ನಡದ ಶಾಲು ಹಾಕಿ ಬೆಂಬಲ ನೀಡುವಂತೆ ತಿಳಿಸಿದರು. ಬಸ್‌ಗಳ ಸಂಚಾರ ಎಂದಿನಿಂತೆ ಇದ್ದರೆ, ಆಟೊರಿಕ್ಷಾ ಸಂಚಾರ ವಿರಳವಾಗಿದೆ. ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.