ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಶುಕ್ರವಾರ ಬೆಳಗಿನ ಜಾವ ಧಾರಾಕಾರ ಮಳೆಯಾಗಿದ್ದು, ಜಮೀನು ಜಲಾವೃತವಾಗಿವೆ. ಚಿಕ್ಕಮಗಳೂರು, ಆಲ್ದೂರು, ನರಸಿಂಹರಾಜಪುರ, ಕಡೂರು, ತರೀಕೆರೆ ಸುತ್ತಮುತ್ತ ಮಳೆ ಸುರಿಯಿತು. ಬೆಳಗಿನ ಜಾವ ಗುಡುಗು ಸಹಿತ ಆರಂಭವಾದ ಮಳೆ 6 ಗಂಟೆ ತನಕ ಸುರಿಯಿತು.
ಬೆಳವಾಡಿ, ಕುರುಬರಹಳ್ಳಿ, ನರಸೀಪುರ, ಮಾಚೇನಹಳ್ಳಿ ಸುತ್ತಮುತ್ತ ಮಳೆಗೆ ಹೊಲಗದ್ದೆಗಳಲ್ಲಿ ಪ್ರವಾಹದಂತೆ ನೀರು ತುಂಬಿಕೊಂಡಿತ್ತು. ಅಡಿಕೆ ಮತ್ತು ತೆಂಗಿನ ತೋಟಗಳು ಜಲಾವೃತಗೊಂಡಿದ್ದರೆ, ಕೆಲ ರೈತರು ಹೊಲದಲ್ಲಿ ಹಾಕಿದ್ದ ಈರುಳ್ಳಿ ರಾಶಿ ಕೂಡ ನೀರಿನಲ್ಲಿ ತೇಲಿ ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.