ADVERTISEMENT

ಚಿಕ್ಕಮಗಳೂರು| ಕೇರಳ ಪೊಲೀಸರ ದಬ್ಬಾಳಿಕೆ ಖಂಡನೀಯ: ಎಚ್.ಜಿ. ರಾಜ್ ಪ್ರಶಾಂತ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:48 IST
Last Updated 15 ಜನವರಿ 2026, 4:48 IST
ರಾಜ್ ಪ್ರಶಾಂತ್
ರಾಜ್ ಪ್ರಶಾಂತ್   

ಚಿಕ್ಕಮಗಳೂರು: ಕರ್ನಾಟಕದಿಂದ ಶಬರಿಮಲೆಗೆ ಹೋಗುತ್ತಿದ್ದ, ಮಾಲಾಧಾರಿಗಳ ಮೇಲೆ ಕೇರಳ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಇದು ಖಂಡನೀಯ ಎಂದು ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಎಚ್.ಜಿ. ರಾಜ್ ಪ್ರಶಾಂತ್ ಹೇಳಿದರು.

ರಾಜ್ಯದ ಎಲ್ಲಾ ವಾಹನಗಳನ್ನು ಕೇರಳ ಪೊಲೀಸರು ಎರಿಮಲೈನಲ್ಲಿ ತಡೆದು ನಿಲ್ಲಿಸಿದ್ದಾರೆ. ಕರ್ನಾಟಕದಿಂದ ಬಾಡಿಗೆ ವಾಹನದಲ್ಲಿ ಹೋದ ಮಾಲಾಧಾರಿಗಳು ಇದರಿಂದ ಕಂಗಾಲಾಗಿದ್ದಾರೆ. ರಸ್ತೆ ಮಧ್ಯದಲ್ಲೇ ಮಾಲಾಧಾರಿಗಳು ಮಲಗುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಕೇರಳ ರಾಜ್ಯದ ಜನ ಕರ್ನಾಟಕದ ಎಲ್ಲೆಡೆ ವಾಸಿಸುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕೆಲಸದಲ್ಲೂ ಇದ್ದಾರೆ. ಕರ್ನಾಟಕ ಸರ್ಕಾರ ಕೇರಳದವರಿಗೆ ಯಾವಾಗಲೂ ತೊಂದರೆ ಕೊಟ್ಟಿಲ್ಲ ಎಂದರು.

ADVERTISEMENT

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾ ದೇಶದವರು ಅಕ್ರಮವಾಗಿ ನೆಲೆಸಿದ್ದು, ಬಾಂಗ್ಲಾದವರಿಗೆ ನಿವೇಶನ ನೀಡಬಾರದು. ಕನ್ನಡಿಗರಿಗೆ ಹೆಚ್ಚಿನ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು‌.

ರಕ್ಷಣಾ ವೇದಿಕೆ ಕಾರ್ಯದರ್ಶಿ ರವಿಚಂದ್ರ, ನಿರ್ದೇಶಕ ಹಾಲಪ್ಪ, ಕಾರ್ಯದರ್ಶಿ ಉಮೇಶ್, ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.