ಕೆ.ಎನ್. ರಾಜಣ್ಣ
ಚಿಕ್ಕಮಗಳೂರು: ‘ಸಿಇಟಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಅಭ್ಯರ್ಥಿಗಳ ಜನಿವಾರ ತೆಗೆಸಿದರೆ ದೊಡ್ಡ ವಿವಾದವಾಗುತ್ತದೆ. ಹೆಣ್ಣು ಮಗಳ ಕೊರಳಿಂದ ತಾಳಿ ತೆಗೆಸಿದಾಗ ಸುದ್ದಿಯೇ ಆಗುವುದಿಲ್ಲ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
‘ಜನಿವಾರ ತೆಗೆಸಿದ್ದನ್ನು ನಾನು ಒಪ್ಪುವುದಿಲ್ಲ, ಖಂಡಿಸುತ್ತೇನೆ. ಜನಿವಾರಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ತಾಳಿಗೂ ಇದೆ. ಆದರೆ, ಅದು ವಿವಾದ ಆಗಲಿಲ್ಲ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಹೆಣ್ಣು ಮಗಳ ತಾಳಿ ತೆಗೆಸಿದ್ದು ಮಾಧ್ಯಮಗಳಿಗೆ ಲೆಕ್ಕಕ್ಕೇ ಇಲ್ಲ. ಏಕೆಂದರೆ ಆಕೆ ಶೂದ್ರ ಹೆಣ್ಣು ಮಗಳು. ಅವರ ತಾಳಿ ಬೇಕಿದ್ದರೆ ತೆಗೆಸಬಹುದು, ಜನಿವಾರ ತೆಗೆಸಿದ್ದೇ ದೊಡ್ಡ ವಿಷಯವಾಗಿದೆ. ಶೋಷಿತರ ಮೇಲೆ ದಬ್ಬಾಳಿಕೆ ನಡೆದರೆ ಯಾವುದೇ ಮಾಧ್ಯಮಗಳು, ರಾಜಕೀಯ ವ್ಯಕ್ತಿಗಳು ಪ್ರಸ್ತಾಪ ಮಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.