ADVERTISEMENT

ಕೊಪ್ಪ ತಾಲ್ಲೂಕು ಕಚೇರಿ; ಕಡತ ನಾಪತ್ತೆ ಪ್ರಕರಣ: ಆರೋಪಿ ಪ್ರಕಾಶ್‌ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 11:25 IST
Last Updated 9 ಮಾರ್ಚ್ 2022, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಕೊಪ್ಪ ತಾಲ್ಲೂಕು ಕಚೇರಿಯಲ್ಲಿನ ಕಡತಗಳ (ನಮೂನೆ ‘50’, ‘53’) ನಾಪತ್ತೆ ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿ ಎಫ್‌ಡಿಎ ಆರ್‌.ಪ್ರಕಾಶ್‌ ಆರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರ್‌.ಪ್ರಕಾಶ್‌

‘ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಕೋರ್ಟ್‌ಗೆ ಹಾಜರುಪಡಿಸಲಾಗುವುದು’ ಎಂದು ಕೊಪ್ಪ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕೆಲ ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಮಂಗಳವಾರ ರಾತ್ರಿ ಚಿಕ್ಕಮಗಳೂರಿನ ನಿವಾಸದಲ್ಲಿ ಸಿಕ್ಕಿಬಿದ್ದಿದ್ದಾರೆ.

ADVERTISEMENT

ಶೃಂಗೇರಿ ತಾಲ್ಲೂಕು ಕಚೇರಿಯ ಎಫ್‌ಡಿಎ ಪ್ರಕಾಶ್‌ ಅವರು ಈ ಹಿಂದೆ ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ನಮೂನೆ ‘50’, ‘53’ ಶಾಖೆ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದರು. ಈ ಶಾಖೆಯ 306 ಕಡತ ನಾಪತ್ತೆಯಾಗಿದ್ದವು. ಪ್ರಕಾಶ್‌ ವಿರುದ್ಧ ಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಶೃಂಗೇರಿ ತಾಲ್ಲೂಕಿನ ಹಕ್ಕುಪತ್ರ ಅಕ್ರಮ ವಿತರಣೆಗೆ ಸಂಬಂಧಿಸಿದಂತೆಯೂ ಪ್ರಕಾಶ್‌ ವಿರುದ್ಧ ದಾಖಲಾಗಿದೆ. ಪ್ರಕಾಶ್‌ ಅವರನ್ನು ಫೆ.25ರಂದು ಅಮಾನತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.