ADVERTISEMENT

ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲರ್ : ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 8 ಮೇ 2024, 9:23 IST
Last Updated 8 ಮೇ 2024, 9:23 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಚಿಕ್ಕಮಗಳೂರು: 'ಪೆನ್ ಡ್ರೈವ್ ಪ್ರಕರಣದಲ್ಲಿ ಮಾತನಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಏನು ವಕೀಲರಾ, ನ್ಯಾಯಾಧೀಶರೇ, ಅವರೊಬ್ಬ ಕಿಂಗ್ ಆಫ್ ಬ್ಲಾಕ್ ಮೇಲರ್' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ನಗರದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಒಕ್ಕಲಿಗ ನಾಯಕತ್ವಕ್ಕೆ ಪೈಪೋಟಿಯಂತೆ, ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ,‌ ಕೊಡೊಣ. ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಹೆದರಿಸುವುದು, ಮುಗಿಸುವುದೇ ಅವರ ಕೆಲಸ. ಪಾಯಿಂಟ್ ಬೈ ಮಾಹಿತಿ ಇದೆಯಂತೆ ಹೋಗಿ ನ್ಯಾಯಾಲಯದಲ್ಲಿ ವಾದ ಮಾಡಲಿ' ಎಂದು ಲೇವಡಿ ಮಾಡಿದರು.

'ಕಥಾ ನಾಯಕ, ನಿರ್ದೇಶಕ, ನಿರ್ಮಾಪಕ ಎಲ್ಲಾ ಅವರೇ, ಎಲ್ಲಾ ವಿಷಯ ಅವರಿಗೇ ಗೊತ್ತಿದೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದಿದ್ದರು. ಈಗ್ಯಾಕೆ‌ ಉರಿ ಬಂದಿದೆ. ರೇವಣ್ಣ ಕುಟುಂಬವೇ ಬೇರೆ, ನನ್ನ ಮತ್ತು ದೇವೇಗೌಡರ ಕುಟುಂಬವೇ ಬೇರೆ ಎಂದಿದ್ದ ಹೇಳಿಕೆಗೆ ಅವರು ಬದ್ಧವಾಗಲಿ. ವಿಧಾನಸಭೆಗೆ ಬರಲಿ ಚರ್ಚೆ ಮಾಡೋಣ' ಎಂದು ಹೇಳಿದರು.

ADVERTISEMENT

'ಸಂತ್ರಸ್ತರು ಅವರ ಪಕ್ಷದ ಕಾರ್ಯಕರ್ತರಂತೆ, ಮರ್ಯಾದೆ ಇದ್ದರೆ ಹೋಗಿ ಅವರಿಗೆ ಧೈರ್ಯ ತುಂಬಲಿ. ನನ್ನ ವಿರುದ್ಧ ಮಾತನಾಡದಿದ್ದರೆ ಅವರಿಗೆ ನಿದ್ರೆ ಬರಲ್ಲ. ನನ್ನ ಹೆಸರು ಹೇಳದಿದ್ರೆ ಅವರಿಗೆ ಮಾರ್ಕೇಟೇ ಇರಲ್ಲ' ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.