ADVERTISEMENT

ಲೋಕವಳ್ಳಿಗೆ ಬಂದ ಕಾಡುಕೋಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 10:56 IST
Last Updated 18 ಜುಲೈ 2018, 10:56 IST
ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಗ್ರಾಮದಲ್ಲಿ ಬುಧವಾರ ಕಾಣಿಸಿಕೊಂಡ ಕಾಡು ಕೋಣ.
ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಗ್ರಾಮದಲ್ಲಿ ಬುಧವಾರ ಕಾಣಿಸಿಕೊಂಡ ಕಾಡು ಕೋಣ.   

ಮೂಡಿಗೆರೆ: ತಾಲ್ಲೂಕಿನ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೋಕವಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಕಾಡು ಕೋಣವೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತು.

ಬುಧವಾರ ಮುಂಜಾನೆ 6.30ರ ಸುಮಾರಿಗೆ ಕಲ್ಲೇಶ್ವರ ಕಾಫಿ ಎಸ್ಟೇಟ್‌ ಕಡೆಯಿಂದ ಗ್ರಾಮದೊಳಕ್ಕೆ ಬಂದ ಕಾಡುಕೋಣ, ಗ್ರಾಮದಲ್ಲಿ ಅತ್ತಿಂದಿತ್ತ ತಿರುಗಾಡಲು ಪ್ರಾರಂಭಿಸಿತು. ಈ ಅಪರೂಪದ ಅತಿಥಿಯನ್ನು ಕಂಡ ಬೀದಿ ನಾಯಿಗಳು ಕಾಡುಕೋಣವನ್ನು ಕಂಡು ಹಿಮ್ಮೆಟ್ಟಿಸಲು ಪ್ರಯತ್ನ ಪಟ್ಟವು. ಅದರೆ ಬೀದಿನಾಯಿಗಳ ವಿರುದ್ಧ ತಿರುಗಿ ಬಿದ್ದ ಕಾಡುಕೋಣ ನಾಯಿಗಳನ್ನೇ ಅಟ್ಟಾಡಿಸತೊಡಗಿತು. ನಾಯಿ ಬೊಗಳುತ್ತಿರುವ ಸದ್ದಿಗೆ ನೆರೆದ ಜನರನ್ನು ಕಂಡ ಕಾಡುಕೋಣ, ಸ್ಥಳದಿಂದ ಕಾಲ್ಕಿತ್ತು ಅಡಿಕೆ ತೋಟದ ಮೂಲಕ ತತ್ಕೊಳ ಅರಣ್ಯದತ್ತ ಸಾಗಿತು.

ಬೆಳೆಹಾನಿ:ಲೋಕವಳ್ಳಿ, ಬಿದರಹಳ್ಳಿ, ಭೈರಿಗದ್ದೆ ಭಾಗಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಈ ಭಾಗಗಳಲ್ಲಿ ಬೆಳೆದಿರುವ ಭತ್ತದ ಸಸಿಮಡಿಗಳನ್ನು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆಯು ಕಾಡುಕೋಣ ಹಾವಳಿಯನ್ನು ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT